ಭಾರತದಲ್ಲಿ ಪಾಕಿಸ್ತಾನಿ ಕಲಾವಿದರು ಕೆಲಸ ಮಾಡುವುದಕ್ಕೆ ನನ್ನ ವಿರೋಧವಿದೆ: ಹೇಮಮಾಲಿನಿ

ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ಹೇಳಿದ್ದಾರೆ.
ಬಿಜೆಪಿ ಸಂಸದೆ ಹೇಮಮಾಲಿನಿ
ಬಿಜೆಪಿ ಸಂಸದೆ ಹೇಮಮಾಲಿನಿ
ಮುಂಬೈ: ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ಹೇಳಿದ್ದಾರೆ. 
"ನಮ್ಮ ದೇಶಕಕ್ಕಾಗಿ ಹೋರಾಡುತ್ತಿರುವ-ಮಡಿಯುತ್ತಿರುವ ಜವಾನರನ್ನು ನಾನು 100 ಪ್ರತಿಶತ ಬೆಂಬಲಿಸುತ್ತೇನೆ ಮತ್ತು ಪಾಕಿಸ್ತಾನಿ ಕಲಾವಿದರು ಇಲ್ಲಿ ಕೆಲಸ ಮಾಡುವುದನ್ನು ಬೆಂಬಲಿಸುವುದಿಲ್ಲ. ಜೈ ಹಿಂದ್" ಎಂದು ಹೇಮಮಾಲಿನಿ ಬುಧವಾರ ಟ್ವೀಟ್ ಮಾಡಿದ್ದಾರೆ. 
ಕಳೆದ ತಿಂಗಳು ಭಾರತೀಯ ಸೇನೆ ಗಡಿ ದಾಟಿ ಉಗ್ರಗಾಮಿಗಳ ಮೇಲೆ ನಿರ್ಧಿಷ್ಟ ದಾಳಿ ನಡೆಸಿದ್ದನ್ನು 67 ವರ್ಷದ ನಟಿ ಪ್ರಶಂಸಿಸಿದ್ದಾರೆ. 
"ನಮ್ಮ ಸೇನೆ ನಿರ್ಧಿಷ್ಟ ದಾಳಿ ನಡೆಸಿ ಮಹತ್ತರವಾದ ಕೆಲಸವನ್ನು ಮಾಡಿದೆ ಮತ್ತು ಇಡೀ ದೇಶ ಅವರನ್ನು ಬೆಂಬಲಿಸಬೇಕು. ಇದಕ್ಕೆ ಸಬೂಬು ಕೇಳುವುದು ಏಕೆ? ನಾನಿದನ್ನು ಒಪ್ಪುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ. 
ಆದರೆ ಒಂದು ದಿನದ ಹಿಂದೆಯಷ್ಟೇ ಹೇಮಮಾಲಿನಿಯವರನ್ನು ಇದರ ಬಗ್ಗೆ ಪ್ರಶ್ನಿಸಿದ್ದಾಗ, ಪಾಕಿಸ್ತಾನ ಕಲಾವಿದರ ಬಗ್ಗೆ ಪ್ರಶಂಸೆಯ ಮಾತನ್ನಾಡಿ, ಅವರು ಇಲ್ಲಿ ಕೆಲಸ ಮಾಡುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. "ನಾನು ಹೆಚ್ಚು ವಿವಾದಾತ್ಮಕ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ನಾನು ಹೇಳುವುದೇನೆಂದರೆ ನಾವೆಲ್ಲರೂ ನಟರು ಮತ್ತು ಪಾಕಿಸ್ತಾನದಿಂದ ಬಂದವರು ಕೂಡ ಇಲ್ಲಿ ಕೆಲಸ ಮಾಡುತ್ತಾರೆ" ಎಂದಿದ್ದರು. 
"ಕಲಾವಿದೆಯಾಗಿ ನಾನು ಅವರ ಕೆಲಸವನ್ನು ಪ್ರಶಂಸಿಸುತ್ತೇನೆ. ಆದರೆ ಅವರು ಇಲ್ಲಿರಬೇಕೇ ಬೇಡವೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಲಾರೆ" ಎಂದು ಮಂಗಳವಾರ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com