ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶನದ, ಗಣೇಶ್ ಮತ್ತು ಶಾನ್ವಿ ಶ್ರೀವತ್ಸ ನಟಿಸುತ್ತಿರುವ ಕನ್ನಡ ಸಿನೆಮಾದ ಶೀರ್ಷಿಕೆ ಬದಲಾಗಿದೆ. ಇದನ್ನು ಮೊದಲಿಗೆ 'ಗಂಡು ಎಂದರೆ ಗಂಡು' ಎಂದು ಕರೆಯಲಾಗಿತ್ತು, ಈಗ 'ಸುಂದರಾಂಗ ಜಾಣ' ಎಂದು ಬದಲಾಗಿದೆ.
ಎ ಎಂ ಸಮೆಉಲ್ಲಾ ನಿರ್ದೇಶನದ 'ಸಂಶಯ ಫಲ' ಸಿನೆಮಾದಲ್ಲಿ 'ದೂರದಿಂತ ಬಂದಂತ ಸುಂದರಾಂಗ ಜಾಣ' ಎಂಬ ಹಾಡೊಂದನ್ನು ಖ್ಯಾತ ಹಾಡುಗಾರ್ತಿ ಎಲ್ ಆರ್ ಈಶ್ವರಿ ಹಾಡಿದ್ದರು. ಸಲೀಲ್ ಚೌಧರಿ ಸಂಗೀತ ನೀಡಿದ್ದ ಈ ಹಾಡಿದ ಸಾಲು ಈಗ ಶೀರ್ಷಿಕೆಯಾಗಿದೆ.
"ಇದು ನಮ್ಮ ಸಿನೆಮಾಗೆ ಸರಿಯಾದ ಹೆಸರು" ಎನ್ನುವ ನಿರ್ದೇಶಕ "ನಾವು ಶೀರ್ಷಿಕೆಯಲ್ಲಿ ಮಾತ್ರವಲ್ಲ ಈ ಕ್ಲಾಸಿಕ್ ಹಾಡಿನ ಕೆಲವು ಭಾಗಗಳನ್ನು ಕೂಡ ಬಳಸಿಕೊಂಡಿದ್ದೇವೆ" ಎನ್ನುತ್ತಾರೆ.
ರಾಕ್ಲೈನ್ ಪ್ರೊಡಕ್ಷನ್ಸ್ ಮತ್ತು ಅಲ್ಲು ಅರವಿಂದ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ 'ಸುಂದರಾಂಗ ಜಾಣ' ಸದ್ಯಕ್ಕೆ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತವಾಗಿದೆ. ಈ ಸಿನೆಮಾದ ಫೋಟೋಗಳ ಬಿಡುಗಡೆಯಲ್ಲಿ ಗಣೇಶ್ ಪೈಲಟ್ ವೇಷ ಧರಿಸಿ, ಶಾನ್ವಿ ಗಗನಸಖಿ ವೇಷ ಧರಿಸಿ ಕಾಣಿಸಿಕೊಂಡಿದ್ದಾರೆ. ಇದು ತೆಲುಗು ಸಿನೆಮಾ 'ಭಲೇ ಭಲೇ ಮಗಾಡಿವೋಯ್'ನ ರಿಮೇಕ್.
"ಈಗ ಅಂತಿಮ ಪ್ರತಿಯನ್ನು ತರಲು ಪ್ರಯತ್ನಿಸುತ್ತಿದ್ದೇನೆ. ಇನ್ನೊಂದು ವಾರದಲ್ಲಿ ಅದು ಸಿದ್ಧವಾಗಿ ಸೆನ್ಸಾರ್ ಮಂಡಳಿ ಮುಂದೆ ಹೋಗಲಿದೆ. ಈ ತಿಂಗಳ ಕೊನೆಯಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಇದೆ" ಎನ್ನುತ್ತಾರೆ ನಿರ್ದೇಶಕ ರಮೇಶ್.
ಈ ಮಧ್ಯೆ ಗಣೇಶ್ 'ಪಟಾಕಿ' ಸಿನೆಮಾದ ಚಿತ್ರೀಕರಣದ ಕೊನೆಯ ಹಂತದಲ್ಲಿದ್ದು, ನವೆಂಬರ್ ನಲ್ಲಿ ಯೋಗರಾಜ್ ಭಟ್ ಅವರ ಯೋಜನೆ ಸೇರಲಿದ್ದಾರೆ.