ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೋರಿದವರಿಗೆ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಪಾಕ್ ವಿರುದ್ಧ ಭಾರತದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ನೀಡುವಂತೆ ಕೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಬಾಲಿವುಡ್ ನಟ ಅಕ್ಷಯ್ ...
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Updated on

ನವದೆಹಲಿ: ಪಾಕ್ ವಿರುದ್ಧ ಭಾರತದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ನೀಡುವಂತೆ ಕೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ , ಈ ಕಿತ್ತಾಟ, ಟೀಕೆಗಳನ್ನೆಲ್ಲಾ ನಿಲ್ಲಿಸಿ ಹುತಾತ್ಮ ಯೋಧರ ಕುಟುಂಬಗಳ ಬಗ್ಗೆ ಹಾಗೂ ಗಡಿಯಲ್ಲಿ ದೇಶ ಕಾಯುವ ಸೈನಿಕರ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.

ಬಾರಾಮುಲ್ಲಾ ದಾಳಿಯಲ್ಲಿ ಪ್ರಾಣ ಕಳೆದು ಕೊಂಡ ಯೋಧ ನಿತಿನ್ ಕುಮಾರ್ ಮತ್ತು ಉರಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಬಗ್ಗೆ ಅಕ್ಷಯ್ ಕುಮಾರ್ ಸ್ಮರಿಸಿದ್ದಾರೆ.

ಯಾರೋ ಒಬ್ಬರು ತಮ್ಮ ಕಾರಣಕ್ಕಾಗಿ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ನಾವು ಇಲ್ಲಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ ಎಂದರೇ ಅದಕ್ಕೆ ಕಾರಣ ಭಾರತೀಯ ಯೋಧರು ಎಂದು ಸ್ವತಃ ಸೇನಾಧಿಕಾರಿಯ ಮಗನಾಗಿರುವ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com