ನಟಿ ಮಯೂರಿ
ನಟಿ ಮಯೂರಿ

ಕಲ್ಲು ಮುಳ್ಳುಗಳನ್ನು ದಾಟಿ ಯಶಸ್ಸಿನ ಹಾದಿಯಲ್ಲಿದ್ದೇನೆ: ಮಯೂರಿ

ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದಿಂದ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದ ನಟಿ ಮಯೂರಿ ಕ್ಯಾತಾರಿ, ನಂತರ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯಂತೆ ಒಂದರ ನಂತರ ಒಂದು ಸಿನೆಮಾ
Published on
ಬೆಂಗಳೂರು: ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದಿಂದ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದ ನಟಿ ಮಯೂರಿ ಕ್ಯಾತಾರಿ, ನಂತರ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯಂತೆ ಒಂದರ ನಂತರ ಒಂದು ಸಿನೆಮಾ ಅವಕಾಶ ಪಡೆಯುತ್ತಲೇ ಬಂದವರು. 
'ಕೃಷ್ಣ ಲೀಲಾ' ಸಿನೆಮಾದಿಂದ ಬೆಳ್ಳಿತೆರೆಗೆ ಜಿಗಿದ ನಟಿ, ಈಗ ಬಹುಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ. 'ಇಷ್ಟಕಾಮ್ಯ'ದಲ್ಲಿ ನಟಿಸಿದ ನಂತರ 'ನಟರಾಜ ಸರ್ವಿಸ್' ಬಿಡುಗಡೆಗಾಗಿ ಕಾಯುತ್ತಿದೆ. ಜೊತೆಗೆ 'ಕರಿಯ 2' ಸಿನೆಮಾದಲ್ಲಿ ನಟಿಸಬೇಕಿದ್ದು, ಮತ್ತೊಂದು ಚಿತ್ರದಲ್ಲಿ ಗುರುನಂದನ್ ಎದುರು ನಟಿಸಲಿದ್ದಾರೆ. 
ಇದಕ್ಕೆಲ್ಲಾ ತಮ್ಮ ಕಠಿಣ ಪರಿಶ್ರಮವೇ ಕಾರಣ ಎನ್ನುತ್ತಾರೆ ಮಯೂರಿ. "ಇಂದು ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಈ ಹಂತಕ್ಕೆ ಬರಲು ಕಷ್ಟ ಪಟ್ಟಿದ್ದೇನೆ. ನನಗೆ ಅದೃಷ್ಟದಲ್ಲಿ ನಂಬಿಕೆಯಿಲ್ಲ ಬದಲಿಗೆ ಪರಿಶ್ರಮದಲ್ಲಿದೆ ಮತ್ತು ಯಶಸ್ಸಿವೆ ಯಾವುದೇ ಅಡ್ಡದಾರಿಗಳಿಲ್ಲ ಎಂದು ನಂಬಿದ್ದೇನೆ" ಎನ್ನುತ್ತಾರೆ. 
ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದು ಅತಿ ದೊಡ್ಡ ಸಂಗತಿ ಎನ್ನುವ ಅವರು "ಶಶಾಂಕ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರುಗಳೊಂದಿಗೆ ಕೆಲಸ ಮಾಡಿದ ನಂತರ ಪವನ್ ಒಡೆಯರ್ ನನ್ನನ್ನು ಗುರುತಿಸಿದ್ದಕ್ಕೆ ಸಂತಸವಿದೆ. ಅವರನ್ನು ಸ್ಟಾರ್ ನಿರ್ದೇಶಕ ಎಂದೇ ನಾನು ತಿಳಿದಿದ್ದೇನೆ. ಅವರ ನಿರ್ದೇಶನದ 'ನಟರಾಜ ಸರ್ವಿಸ್' ದೊಡ್ಡ ಸಿನೆಮಾ ಏಕೆಂದರೆ ಪುನೀತ್ ರಾಜಕುಮಾರ್ ಅದನ್ನು ಅರ್ಪಿಸಿದ್ದಾರೆ ಮತ್ತು ಎನ್ ಎಸ್ ರಾಜಕುಮಾರ್ ನಿರ್ಮಾಪಕ" ಎನ್ನುತ್ತಾರೆ ನಟಿ. 
'ನಟರಾಜ ಸರ್ವಿಸ್' ಎಂದರೆ ನಡೆಯುವುದು ಮತ್ತು ನನ್ನ ಬಾಲ್ಯದಲ್ಲಿ ನಾನು ನಡೆಯುತ್ತಲೇ ಇದ್ದೆ ಎನ್ನುವ ನಟಿ "ಮಧ್ಯಮ ವರ್ಗದಿಂದ ಬಂದವಳಾದ್ದರಿಂದ ನನ್ನನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ಮತ್ತು ಹಿಂದಿರುಗಿ ಬಿಡುವ ಸೌಕರ್ಯ ಇರಲಿಲ್ಲ. ಪುಯುಸಿ ಮುಗಿಯುವವರೆಗೂ ಶಾಲೆಗೆ, ಕಾಲೇಜಿಗೆ, ಮನೆ ಪಾಠಕ್ಕೆ ನಡೆದೇ ಹೋಗುತ್ತಿದೆ. ಇಂದು ನನಗೆ ಸಿಕ್ಕಿರುವ ಸೌಕರ್ಯಗಳ ನಡುವೆಯೂ ನನಗೆ ನಡೆಯುವುದೆಂದರೆ ಇಷ್ಟ. ಇದು ನನ್ನ ವೃತ್ತಿಗೂ ಅನ್ವಯಿಸುತ್ತದೆ. ನನ್ನ ಖ್ಯಾತಿಯಿಂದ ನನಗೆ ತಲೆತಿರುಗುವುದು ಬೇಡ, ಅದನ್ನು ಸಾವರಿಸಿಕೊಂಡು ಮುನ್ನಡೆಯುತ್ತೇನೆ" ಎನ್ನುತ್ತಾರೆ ಮಯೂರಿ. 
ಶರಣ್ ಜೊತೆಗೆ ನಟಿಸಿರುವ 'ನಟರಾಜ ಸರ್ವಿಸ್' ಅಕ್ಟೋಬರ್ 21 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com