ಕನ್ನಡಿಗರಿಗೆ ಅಜರಾಮರರಾಗಿ ಉಳಿದಿರುವ ವಿಷ್ಣು ಮತ್ತು ನಾಗರಹಾವು

ಕನ್ನಡ ಸಿನೆಮಾರಂಗದ ದಂತಕಥೆ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ತಂತ್ರಜ್ಞಾದಲ್ಲಿ ಮತ್ತೆ ತೆರೆಯಮೇಲೆ ತಂದಿರುವುದಕ್ಕೆ ನೂತನ 'ನಾಗರಹಾವು' ಸಿನೆಮಾ ಬಹಳಷ್ಟು ಸುದ್ದಿ ಮಾಡಿದೆ.
ನೂತನ 'ನಾಗರಹಾವು' ಸಿನೆಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಮೂಡಿರುವ ವಿಷ್ಣುವರ್ಧನ್
ನೂತನ 'ನಾಗರಹಾವು' ಸಿನೆಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಮೂಡಿರುವ ವಿಷ್ಣುವರ್ಧನ್
ಬೆಂಗಳೂರು: ಕನ್ನಡ ಸಿನೆಮಾರಂಗದ ದಂತಕಥೆ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ತಂತ್ರಜ್ಞಾದಲ್ಲಿ ಮತ್ತೆ ತೆರೆಯಮೇಲೆ ತಂದಿರುವುದಕ್ಕೆ ನೂತನ 'ನಾಗರಹಾವು' ಸಿನೆಮಾ ಬಹಳಷ್ಟು ಸುದ್ದಿ ಮಾಡಿದೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಲನಚಿತ್ರ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು, ಬಿಡುಗಡೆಗೂ ಮುಂಚಿತವಾಗಿಯೇ 100 ಕೋಟಿ ವ್ಯವಹಾರ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಲವರ ಹುಬ್ಬೇರಿಸಿದೆ. 
ಈ ನಡುವೆ ವಿಷ್ಣುವರ್ಧನ್ ಅವರು ಭೌತಿಕವಾಗಿ ದೂರವಾಗಿದ್ದರು, ಕನ್ನಡ ಚಿತ್ರರಂಗದವರ ಕಲ್ಪನೆಯಲ್ಲಿ ಅವರು ಇನ್ನು ಜೀವಂತವಾಗಿರುವುದೇ ವಿಶೇಷ. ನಟ ಸುದೀಪ್ ಅವರ ಎರಡು ಸಿನೆಮಾಗಳು 'ವಿಷ್ಣುವರ್ಧನ' ಮತ್ತು 'ಕೋಟಿಗೊಬ್ಬ-2' ಮೇರು ನಟನಿಗೆ ಗೌರವ ಸಲ್ಲಿಸಿದ ಸಿನೆಮಾಗಳೇ! ಸಂತೋಷ್ ಆನಂದರಾಮ್ ನಿರ್ದೇಶನದ ಯಶ್ ಅಭಿನಯದ ಮಿ&ಮಿಸೆಸ್ ರಾಮಾಚಾರಿ ಸಿನೆಮಾದಲ್ಲಿ, ಯಶ್ ಅವರನ್ನು ಕೋಪಯುಕ್ತ ಯುವಕನಾಗಿ ತೋರಿಸಲಾಗಿತ್ತು. ಆ ಪಾತ್ರದ ಹೆಸರು ಮತ್ತು ಸ್ವಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರ ಹಾವು' ಸಿನೆಮಾದ ವಿಷ್ಣುವರ್ಧನ್ ಪಾತ್ರ ರಾಮಾಚಾರಿಯಿಂದ ಸ್ಫೂರ್ತಿ ಪಡೆದು ಗೌರವಿಸಿತ್ತು. 
ಈಗ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಶಿವರಾಜ್ ಕುಮಾರ್ ನಟನೆಯ 'ಶ್ರೀಕಂಠ' ಕೂಡ ನಾಗರಹಾವಿನ ಮತ್ತು ವಿಷ್ಣು ಶೈಲಿಯನ್ನು ತನ್ನದಾಗಿಸಿಕೊಂಡಿದೆ. ಸಿನೆಮಾದ ಟ್ರೇಲರ್ ನಲ್ಲಿ ವಿಷ್ಣುವರ್ಧನ್ ಅವರ ಸುಪ್ರಸಿದ್ಧ ಶೈಲಿಯನ್ನು ನಟ ಶಿವರಾಜ್ ಕುಮಾರ್ ಅನುಸರಿಸಿದ್ದರೆ, ಹಿನ್ನಲೆಯಲ್ಲಿ 'ಹಾವಿನ ದ್ವೇಷ ಹನ್ನೆರಡು ವರ್ಷ' ಹಾಡು ಮೊಳಗುತ್ತಿರುತ್ತದೆ. 
ಈಗ ದಿಗಂತ್ ಮತ್ತು ರಮ್ಯಾ ಅಭಿನಯದ 'ನಾಗರಹಾವು' ಶುಕ್ರವಾರ ತೆರೆಕಾಣಲು ಸಿದ್ಧವಾಗಿದ್ದು, ವಿಷ್ಣುವರ್ಧನ್ ಕನ್ನಡಿಗರಿಗೆ ಅಜರಾಮರಾಗಿ ಉಳಿದಿರುವುದನ್ನು ಮತ್ತೆ ನೆನಪಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com