ಹೊಟ್ಟೆ ಹುಣ್ಣಾಗುವಂತೆ ನಗಿಸಲು ಬರ್ತಿದ್ದಾರೆ ಜಗ್ಗೇಶ್, ರಕ್ಷಿತಾ, ಯೋಗರಾಜ್ ಭಟ್

ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ರಾತ್ರಿ ಒಂಬತ್ತು ಗಂಟೆಗೆ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ಪ್ರಧಾನಿ ಕಾರ್ಯಕ್ರಮ ಪ್ರಸಾರವಾಗಲಿದೆ. ನವರಸ ನಾಯಕ...
ಜಗ್ಗೇಶ್, ರಕ್ಷಿತಾ, ಯೋಗರಾಜ್ ಭಟ್
ಜಗ್ಗೇಶ್, ರಕ್ಷಿತಾ, ಯೋಗರಾಜ್ ಭಟ್
Updated on

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ರಾತ್ರಿ ಒಂಬತ್ತು ಗಂಟೆಗೆ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ಪ್ರಧಾನಿ ಕಾರ್ಯಕ್ರಮ ಪ್ರಸಾರವಾಗಲಿದೆ. ನವರಸ ನಾಯಕ ಜಗ್ಗೇಶ್, ನಟಿ ರಕ್ಷಿತಾ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಕಾಮಿಡಿ ಕಿಲಾಡಿಗಳು’ ಹೆಸರಿನ ಹೊಸ ರಿಯಾಲಿಟಿ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ. ಕಾರ್ಯಕ್ರಮಕ್ಕಾಗಿ ರಾಜ್ಯದ 7 ಪ್ರಮುಖ ಜಿಲ್ಲೆಗಳಲ್ಲಿ 10ರಿಂದ 60ರ ವಯೋಮಾನದ ಸುಮಾರು 5000 ಜನರನ್ನು ಆಡಿಷನ್ಸ್ ನಡೆಸಲಾಗಿತ್ತು. ಅದರಲ್ಲಿ ಅತ್ಯುತ್ತಮ ಎನಿಸಿದ 14 ಜನರನ್ನು ಆಯ್ಕೆ ಮಾಡಿ ಈ ವೇದಿಕೆಗೆ ತರಲಾಗುತ್ತಿದೆ.

ಈ ಹಿಂದೆ ಇದೇ ವಾಹಿನಿಯಲ್ಲಿ ‘ಕಾಮಿಡಿ ಕಿಲಾಡಿಗಳು’ ಶೋ ಪ್ರಸಾರವಾಗಿತ್ತು. ಆದರೆ ಈ ಬಾರಿ ಶುರುವಾಗುತ್ತಿರುವ ಶೋ ಮತ್ತಷ್ಟು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಡ್ರಾಮಾ ಜೂನಿಯರ್ಸ್’ ಶೋ ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಮಾ. ಆನಂದ್, ‘ಕಾಮಿಡಿ ಕಿಲಾಡಿಗಳು’ ಶೋ ನಿರೂಪಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗಕ್ಕೆ ಕನಿಷ್ಠ ನಾಲ್ಕು ಹಾಸ್ಯ ಕಲಾವಿದರನ್ನು ಕರೆತರುವುದಾಗಿ ನಟ ಜಗ್ಗೇಶ್ ಭರವಸೆ ವ್ಯಕ್ತ ಪಡಿಸಿದ್ದಾರೆ. ಈ ಹಾಸ್ಯ ಪ್ರತಿಭೆ ಗಳನ್ನು ನೋಡಿ ನಮಗೆ ಆಶ್ಚರ್ಯವಾಗಿದೆ. ಜಗ್ಗೇಶ್ ಮುಂದಿನ ಭಟ್ರು ಸಿನಿಮಾಗೆ ಈ ವೇದಿಕೆ ಒಬ್ಬ ಕಲಾವಿದೆಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನನಗೆ ಕಾಮಿಡಿ ಪ್ರೊಫೆಸರ್ ಎಂಬ ಬಿರುದು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com