'ನೂರೊಂದು ನೆನಪು' ಹೊಸ ಪೋಸ್ಟರ್ ಅನಾವರಣ

ನಿರೀಕ್ಷಿತ ಚಿತ್ರ 'ನೂರೊಂದು ನೆನಪು' ಸಿನೆಮಾದ ಚಿತ್ರೀಕರಣದ ಅನುಭವಗಳನ್ನು ನಿರ್ಮಾಪಕ ಸೂರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ಮತ್ತು ಚಿತ್ರತಂಡ ಹಂಚಿಕೊಂಡಿದ್ದಾರೆ.
ನೂರೊಂದು ನೆನಪು ಸಿನೆಮಾದ ಪೋಸ್ಟರ್
ನೂರೊಂದು ನೆನಪು ಸಿನೆಮಾದ ಪೋಸ್ಟರ್
ಬೆಂಗಳೂರು: ನಿರೀಕ್ಷಿತ ಚಿತ್ರ 'ನೂರೊಂದು ನೆನಪು' ಸಿನೆಮಾದ ಚಿತ್ರೀಕರಣದ ಅನುಭವಗಳನ್ನು ನಿರ್ಮಾಪಕ ಸೂರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ಮತ್ತು ಚಿತ್ರತಂಡ ಹಂಚಿಕೊಂಡಿದ್ದಾರೆ. 
ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರತಂಡ, ನಾಯಕ ನಟ ಚೇತನ್, ನಟಿ ಮೇಘನಾ ರಾಜ್, ರಾಜವರ್ಧನ್, ಸುಶ್ಮಿತಾ ಜೋಶಿ ಅರ್ಚನಾ ಇರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಸುಹಾಸ್ ಶಿವಾಲ್ಕರ್ ಅವರಿಂದ ರಚಿತವಾಗಿರುವ ಮರಾಠಿ ಕಾದಂಬರಿ 'ದುನಿಯಾದ್ರಿ'ಯ ದೃಶ್ಯ ಅಡವಳಿಕೆ ಈ ಸಿನೆಮಾ. ಈ ಸಿನೆಮಾದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿರುವ ಕುಮಾರೇಶ್, 80 ರ ದಶಕದ ಕಾಲೇಜು ದಿನಗಳನ್ನು ನೆನಪಿಸುವ ಕಾಲಘಟ್ಟದ ಡ್ರಾಮಾ ಇದು ಎನ್ನುತ್ತಾರೆ. 
ಈ ಚಿತ್ರದಲ್ಲಿ ನಾಯಕನಟನಾಗಿರುವ 'ಆ ದಿನಗಳು' ಖ್ಯಾತಿಯ ಚೇತನ್, ಈ ಸಿನೆಮಾದ ಯುವ ಜೀವನದ ಕಥೆ ನನಗೆ ಬಹಳ ಇಷ್ಟವಾಯಿತು. ಸಾಮಾಜಿಕ ಚಟುವಟಿಕೆಗಳಲ್ಲಿ ಇಷ್ಟು ದಿನ ತೊಡಗಿಸಿಕೊಂಡಿದ್ದು, ಸಿನೆಮಾಗಳಿಂದ ದೂರವುಳಿಯುವಂತೆ ಮಾಡಿತು ಎಂದು ಕೂಡ ತಿಳಿಸುತ್ತಾರೆ. 
ಸಿನೆಮಾದ 70% ಚಿತ್ರೀಕರಣ ಸಂಪೂರ್ಣಗೊಂಡಿದ್ದು ಕೆಲವು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com