
ಬೆಂಗಳೂರು: ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ ಮೊದಲ ವಾರದಲ್ಲೇ ಕಿರುತೆರೆ ನಟಿ ವಾಣಿಶ್ರೀ ಮನೆಯಿಂದ ಹೊರ ಬಿದ್ದಿದ್ದಾರೆ.
ಬಿಗ್‌ಬಾಸ್‌ನ ನಾಲ್ಕನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 15 ಸ್ಪರ್ಧಿಗಳು ಭಾಗವಹಿಸಿದ್ದು, ಈ ವಾರ ಭುವನ್, ಸಂಜನಾ, ಪ್ರಥಮ್ ಹಾಗೂ ವಾಣಿಶ್ರೀ ನಾಮ ನಿರ್ದೇಶನಗೊಂಡಿದ್ದರು.
ವೀಕ್ಷಕರು ಹಾಗೂ ಇತರ ಸ್ಪರ್ಧಿಗಳು ವಾಣಿಶ್ರೀಯವರನ್ನೇ ಹೊರಬರಲು ನಾಮನಿರ್ದೇಶನ ಮಾಡಿದ್ದರಿಂದ ವಾಣಿಶ್ರೀ ಹೊರಬರಬೇಕಾಯಿತು.
ಕಳೆದ ಎರಡು ದಶಕಗಳಿಂದ ವಾಣಿಶ್ರೀ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಮನೆಯೊಳಗೆ ಇತರ ಸ್ಪರ್ಥಿಗಳಿಗೆ ಇರಿಸು ಮುರಿಸು ತರಿಸುತ್ತಿದ್ದ ಹೇಳಿಕೆಗಳಿಂದ ಪ್ರಥಮ್ ಎಲಿಮಿನೇಟ್ ಆಗುತ್ತಾರೆಂದು ಊಹಿಸಲಾಗಿತ್ತು. ಆದರೆ ಅವರ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ವೋಟ್ ಮಾಜಿದ ಕಾರಣದಿಂದಾಗಿ ಪ್ರಥಮ್ ಸೇಫ್ ಆಗಿದ್ದಾರೆ.
Advertisement