ಇನ್ನು ಒಳ್ಳೆಯ ನಿರ್ದೇಶಕನಿದ್ದರೆ ಜಾಗ್ವಾರ್ ಇನ್ನು ಒಳ್ಳೆಯ ಪ್ರದರ್ಶನ ಕಾಣುತಿತ್ತು: ನಿಖಿಲ್

ಅದ್ದೂರಿ ಸಿನೆಮಾದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಖಿಲ್ ಕುಮಾರ್ ಈಗ ಈ ವೃತ್ತಿಯ ಕೆಲವು ಸಂದಿಗ್ಧಗಳನ್ನು ಅರಿತಿದ್ದಾರೆ. 'ಜಾಗ್ವಾರ್'
ನಿಖಿಲ್ ಕುಮಾರ್
ನಿಖಿಲ್ ಕುಮಾರ್
ಬೆಂಗಳೂರು: ಅದ್ದೂರಿ ಸಿನೆಮಾದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಖಿಲ್ ಕುಮಾರ್ ಈಗ ಈ ವೃತ್ತಿಯ ಕೆಲವು ಸಂದಿಗ್ಧಗಳನ್ನು ಅರಿತಿದ್ದಾರೆ. 'ಜಾಗ್ವಾರ್' ಸಿನೆಮಾದ ಪ್ರಚಾರ ಪ್ರವಾಸದಿಂದ ಹಿಂದಿರುಗಿರುವ ನಿಖಿಲ್, ತಮ್ಮ ಚೊಚ್ಚಲ ಚಿತ್ರಕ್ಕೆ ಅಪಾರ ಅಭಿಮಾನಿಗಳು ಸೃಷ್ಟಿಯಾಗಿದ್ದು ಅವರನ್ನು ಭೇಟಿ ಮಾಡಿದ ಸಂತಸದಲ್ಲಿದ್ದಾರೆ. 
"ಕರ್ನಾಟಕದ ಜನ ನನ್ನನ್ನು ಸ್ವಾಗತಿಸಿದ ರೀತಿಗೆ ನಾನು ಸಂತಸಗೊಂಡಿದ್ದೇನೆ. ಹಾಗೆಯೇ ಜಿಂದಾಲ್ ನಲ್ಲಿ ನಾನು ಭೇಟಿ ಮಾಡಿದ ಕೆಲವು ಉತ್ತರ ಭಾರತೀಯರು ನನ್ನ ಸಿನೆಮಾ ಇಷ್ಟ ಪಟ್ಟಿದ್ದಾಗಿ ಹೇಳಿದರು. ಬಿ ಮತ್ತು ಸಿ ಕೇಂದ್ರಗಳಲ್ಲಿ ಜನ ಸಿನೆಮಾವನ್ನು ಇಷ್ಟಪಡುತ್ತಾರೆ ಎಂದು ತಿಳಿದಿತ್ತು ಆದರೆ ಕ್ಲಾಸ್ ಪ್ರೇಕ್ಷಕರು ಕೂಡ ಇದನ್ನು ಮೆಚ್ಚಿದ್ದಾರೆ" ಎನ್ನುತ್ತಾರೆ ನಿಖಿಲ್. 
ಆದರೆ 'ಜಾಗ್ವಾರ್' ಸಿನೆಮಾವನ್ನು ಇನ್ನು ಚೆನ್ನಾಗಿ ನಿರ್ಮಿಸಬಹುದಿತ್ತು ಎನ್ನುತ್ತಾರೆ ನಿಖಿಲ್ "ಇನ್ನು ಒಳ್ಳೆಯ ನಿರ್ದೇಶಕ ಇದ್ದರೆ ಸಿನೆಮಾ ಇನ್ನು ಒಳ್ಳೆಯ ಪ್ರದರ್ಶನ ಕಾಣುತ್ತಿತ್ತು ಎಂದು ಮುಕ್ತವಾಗಿ ಹೇಳಬಲ್ಲೆ. ಅಂದರೆ ಇನ್ನು ಒಳ್ಳೆಯ ಉತ್ಪನ್ನ ಮೂಡುತ್ತಿತ್ತು. ಮತ್ತು ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನನಗೆ ಇನ್ನು ಸ್ವಲ್ಪ ಹೆಚ್ಚಿನ ಸಮಯ ಬೇಕಾಗಿತ್ತು. ಆದರೆ ಕರ್ನಾಟಕದ ಜನರು ಜಾಗ್ವಾರ್ ಇಷ್ಟ ಪಟ್ಟಿದ್ದಾರೆ ಆದರೆ ವೈಯಕ್ತಿಕವಾಗಿ ಕೆಲವು ಕಡೆ ಇನ್ನು ಚೆನ್ನಾಗಿ ಮಾಡಬೇಕಿತ್ತು ಎನ್ನಿಸಿದೆ" ಎನ್ನುತ್ತಾರೆ. 
ಮೊದಲ ಸಿನೆಮಾದ ತಪ್ಪುಗಳಿಂದ ಸಾಕಷ್ಟು ಕಲಿತಿರುವೆ ಎನ್ನುವ ನಿಖಿಲ್ ಸುಧೀರ್ ರೆಡ್ಡಿ ನಿರ್ದೇಶನದಲ್ಲಿ ಮೂಡುತ್ತಿರುವ ಮುಂದಿನ ಸಿನೆಮಾಗೂ ಮುಂಚಿತವಾಗಿ ಇನ್ನು ಹೆಚ್ಚಿನ ತರಬೇತಿ ಪಡೆಯುವತ್ತ ಚಿತ್ತ ತೊಟ್ಟಿದ್ದಾರೆ. "ಮುಂದಿನ ಮೂರು ತಿಂಗಳವರೆಗೆ ನಾನು ನೃತ್ಯ ಮತ್ತು ಆಕ್ಷನ್ ನಲ್ಲಿ ಹೆಚ್ಚಿನ ತರಬೇತಿ ಪಡೆಯಲಿದ್ದೇನೆ. ಅದು ನನ್ನ ಶಕ್ತಿಯ ಕ್ಷೇತ್ರ" ಎನ್ನುತ್ತಾರೆ. 
ಎರಡನೇ ಸಿನೆಮಾದಲ್ಲಿ ಕನ್ನಡ ನಟರು ಮಾತ್ರ!
ತಮ್ಮ ಎರಡನೇ ಸಿನೆಮಾದ ನಿರ್ಮಾಣ ಜವಾಬ್ದಾರಿಯನ್ನು ಕೂಡ ಹೊರಲು ಸಿದ್ಧವಾಗಿರುವ ನಿಖಿಲ್ ಕನ್ನಡ ಪ್ರತಿಭೆಗಳನ್ನು ಹುಡುಕುವ ಏಜೆನ್ಸಿ ಪ್ರಾರಂಭಿಸಲಿದ್ದಾರಂತೆ. ನಾಯಕ ನಟಿ ಮತ್ತು ನಟರು ಕನ್ನಡಿಗರೇ ಆಗಿರಲಿದ್ದು ಹೊಸ ಪ್ರತಿಭೆಗಳತ್ತ ಮನಸ್ಸು ನೆಟ್ಟಿದ್ದಾರೆ. 
ನೂತನ ಸ್ಟುಡಿಯೋ ನಿರ್ಮಾಣ
ಕನ್ನಡ ಚಿತ್ರರಂಗಕ್ಕಾಗಿ ನೂತನ ಸ್ಟುಡಿಯೋವಂದನ್ನು ಕೂಡ ಕಟ್ಟುತ್ತಿದ್ದಾರೆ ನಿಖಿಲ್ ಕುಮಾರ್. "ಇದು ಒಂದರಿಂದ ಎರಡು ತಿಂಗಳ ಕಾಲ ಹಿಡಿಯುತ್ತದೆ. ಕಂಪ್ಯೂಟರ್ ಗ್ರಾಫಿಕ್ಸ್, ಡಬ್ಬಿಂಗ್ ಸ್ಟುಡಿಯೊಗಳಲ್ಲದೆ, ಉನ್ನತ ತಂತ್ರಜ್ಞಾನದ ಸೌಲಭ್ಯಗಳು ಇಲ್ಲಿ ದೊರಕಲಿವೆ. ನಾನು ಬಳಸದೆ ಇದ್ದಾಗ ಅವುಗಳನ್ನು ಬಾಡಿಗೆ ಕೊಡುತ್ತೇನೆ" ಎನ್ನುತ್ತಾರೆ. 
ಮೂರನೇ ಸಿನೆಮಾಗೆ ಕನ್ನಡ ನಿರ್ದೇಶಕ
ತಮ್ಮ ಮೂರನೇ ಸಿನೆಮಾವನ್ನು ಕನ್ನಡ ನಿರ್ದೇಶಕ ನಿರ್ದೇಶಿಸಲಿದ್ದಾರೆ ಎನ್ನುವ ನಿಖಿಲ್ ಎಸ್ ಕೃಷ್ಣ, ಹರ್ಷ, ಚೇತನ್ ಮತ್ತು ಸಂತೋಷ್ ಆನಂದರಾಮ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ,. "ನನ್ನ ಮೂರನೇ ಸಿನೆಮಾ ಕನ್ನಡ ನಿರ್ದೇಶಕರಿಂದ ಮೂಡಲಿದೆ. ಹಲವು ನಿರ್ದೇಶಕರಿಂದ ಚಿತ್ರಕಥೆ ಕೇಳುತ್ತಿದ್ದೇನೆ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com