ಮುಂಬೈ: ನಿರ್ದೇಶಕ ರಾಜಮೌಳಿ ತಮ್ಮ ಬಹು ನಿರೀಕ್ಷಿತ ಚಿತ್ರ 'ಬಾಹುಬಲಿ-2: ಮುಕ್ತಾಯ' ಸಿನೆಮಾದ ಮೊದಲ ನೋಟ 18 ನೇ ಮುಂಬೈ ಸಿನಿಮೋತ್ಸವದಲ್ಲಿ ಅನಾವರಣ ಮಾಡಲಿದ್ದಾರೆ.
ಮುಂಬೈ ಸಿನಿಮೋತ್ಸವದಲ್ಲಿ ಮೂವಿ ಮೇಳ ಎಂಬ ವಿಭಾಗವಿದ್ದು, ಭಾರತೀಯ ಜನಪ್ರಿಯ ಸಿನೆಮಾಗಳಿಗೆ ಅದನ್ನು ಮೀಸಲಿಡಲಾಗಿದೆ. ಈ ಮೂವಿ ಮೆಳಾದ ಪ್ರಮುಖ ಅಂಶಗಳಲ್ಲಿ ಒಂದು ಬಾಬಹುಬಲಿ-2 ಮೊದಲ ನೋಟ ಅನಾವರಣ. ಅದು ಅಕ್ಟೋಬರ್ 22 ಕ್ಕೆ ಜರುಗಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಮೂವಿ ಮೇಳದಲ್ಲಿ 'ಬಾಹುಬಲಿ-2' ನಟರು ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಐತಿಹಾಸಿಕ ಕಾಲ್ಪನಿಕ ಡ್ರಾಮಾದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ನಟಿಸಿದ್ದಾರೆ. ಈ ಸಿನೆಮಾ ಮುಂದಿನ ವರ್ಷ ಏಪ್ರಿಲ್ 28 ಕ್ಕೆ ಬಿಡುಗಡೆಯಾಗಲಿದೆ.
"ನಾನು ಎಲ್ಲ ಅಭಿಮಾನಿಗಳ ನಡುವೆ ಬಾಬಹುಬಲಿ-2 ಮೊದಲ ನೋಟ ಅನಾವರಣ ಮಾಡಲು ಉತ್ಸುಕನಾಗಿದ್ದೇನೆ. ಮುಂಬೈ ಸಿನಿಮೋತ್ಸವದ ಮೂವಿ ಮೇಳದಲ್ಲಿ ಇದನ್ನು ಮಾಡುತ್ತಿರುವದು ಅತೀವ ಸಂತಸ ತಂದಿದೆ. ಅದರಲ್ಲೂ ಇಡೀ ತಾರಾಗಣ ಭಾಗವಹಿಸಿರುವುದು ಇದನ್ನು ಇಮ್ಮಡಿಗೊಳಿಸಿದೆ" ಎಂದು ರಾಜಮೌಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.