'ಸಂತು ಸ್ಟ್ರೈಟ್ ಫಾರ್ವರ್ಡ್' ನಲ್ಲಿ ಯಶ್
ಸಿನಿಮಾ ಸುದ್ದಿ
ಯಶ್ ಈಗ 'ಸೆಲ್ಫ್ ಮೇಡ್ ಶೆಹಜಾದ'
ನಟ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಬಿಡುಗಡೆ ಸನಿಹವಾಗುತ್ತಿದ್ದು, ಸಿನೆಮಾದ ಪರಿಚಯ ಹಾಡು ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆಯಂತೆ.
ಬೆಂಗಳೂರು: ನಟ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಬಿಡುಗಡೆ ಸನಿಹವಾಗುತ್ತಿದ್ದು, ಸಿನೆಮಾದ ಪರಿಚಯ ಹಾಡು ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆಯಂತೆ. 'ಸೆಲ್ಫ್ ಮೇಡ್ ಶೆಹಜಾದ' ಎಂಬ ಹಾಡು ಸಿನೆಮಾದಲ್ಲಿ ಈ ನಾಯಕನಟನ ಪಾತ್ರವನ್ನು ಪರಿಚಯಿಸಲಿದೆ.
ಚೇತನ್ ಕುಮಾರ್ ಗೀತರಚನೆ ಮಾಡಿರುವ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಕ್ಟೋಬರ್ 11 ರಂದು ಬಿಡುಗಡೆಯಾದ ಹಾಡುಗಳು ಈಗಾಗಲೇ ಸಾಮಾಜಿಕ ಅಂತರ್ಜಾಲದಲ್ಲಿ ಜನಪ್ರಿಯವಾಗಿವೆಯಂತೆ. ಲಹರಿ ಸಂಸ್ಥೆ ಸಿನೆಮಾದ ಆಡಿಯೋ ಹಕ್ಕುಗಳನ್ನು ದಾಖಲೆ ಬೆಲೆ 1.08 ಕೋಟಿಗೆ ಕೊಂಡಿತ್ತು.
ಈ ಹಿಟ್ ಹಾಡನ್ನು ಇತ್ತೀಚೆಗಷ್ಟೇ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹೇಳುವಂತೆ ಇದು ಮಾಮೂಲಿ ರೀತಿಯ ಹಾಡಲ್ಲವಂತೆ! "ಮೊದಲ ಬಾರಿಗೆ ಒಳಾಂಗಣದಲ್ಲಿ ಪರಿಚಯ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಪ್ರಯತ್ನ ಮಾಡಿದ್ದೇನೆ" ಎನ್ನುತ್ತಾರೆ.
ಈ ಪರಿಚಯದ ಹಾಡಿನಲ್ಲಿ 9 ಜನ ವಿಲನ್ ಗಳು ಇದ್ದು ಅದು ಈ ಹಾಡಿನ ಮುಖ್ಯಾಂಶ ಎನ್ನುತ್ತಾರೆ ಮುರಳಿ "ಈ ಪರಿಚಯ ಹಾಡಿನಲ್ಲಿ ವಿಲನ್ ಗಳು ಹೇಳುವ ಕೆಲವು ಸಾಲುಗಳಿವೆ ಅದಕ್ಕೆ ನಾಯಕನ ಅಭಿಮಾನಿಗಳು ಮತ್ತು ಬೆಂಬಲಿಗರು ಉತ್ತರಿಸುತ್ತಾರೆ" ಎನ್ನುತ್ತಾರೆ.
ಈ ಹಾಡಿಗಾಗಿ ನಿರ್ಮಾಪಕರು ವ್ಯಯಿಸಿರುವ ಮೊತ್ತ 1.25 ಕೋಟಿಯಂತೆ. ಈ ಹಾಡಿಗೆ ರಷ್ಯಾ ಮತ್ತು ಮುಂಬೈನಿಂದ ಸುಮಾರು 120 ಸದಸ್ಯರು ನೃತ್ಯ ಮಾಡಿದ್ದಾರಂತೆ. ಯೋಗಿ ಮತ್ತು ಸಾನಿಯಾ ಇದಕ್ಕೆ ವಸ್ತ್ರವಿನ್ಯಾಸ ಮಾಡಿದ್ದಾರೆ.
ರಾಧಿಕಾ ಪಂಡಿತ್ ನಾಯಕನಟಿಯಾಗಿರುವ ಈ ಸಿನೆಮಾ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ