ತಂದೆಯ ರಾಬಿನ್ ಹುಡ್ ಕಥೆ ಹೇಳಲು ಬರುತ್ತಿದ್ದಾರೆ ಅಜಿತ್ ಜಯರಾಜ್

ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ಹೆಸರು ಸಾಮಾನ್ಯವಾಗಿ ಬಲ್ಲದವರಿಲ್ಲ. "ವೈದ್ಯನ ಮಗ ವೈದ್ಯನೇ ಆಗಬೇಕಿಲ್ಲ" ಎಂದು ನಂಬುವ ಜಯರಾಜ್ ಅವರ ಮಗ ಅಜಿತ್ ತಮ್ಮ ತಂದೆಯ ಬಗ್ಗೆ ಸಿನೆಮಾ
ಅಜಿತ್ ಜಯರಾಜ್
ಅಜಿತ್ ಜಯರಾಜ್
ಬೆಂಗಳೂರು: ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ಹೆಸರು ಸಾಮಾನ್ಯವಾಗಿ ಬಲ್ಲದವರಿಲ್ಲ. "ವೈದ್ಯನ ಮಗ ವೈದ್ಯನೇ ಆಗಬೇಕಿಲ್ಲ"  ಎಂದು ನಂಬುವ ಜಯರಾಜ್ ಅವರ ಮಗ ಅಜಿತ್ ತಮ್ಮ ತಂದೆಯ ಬಗ್ಗೆ ಸಿನೆಮಾ ಮಾಡಲು ಮುಂದಾಗಿದ್ದಾರೆ. "ನನ್ನ ತಂದೆಯನ್ನು ಭೂಗತ ದೊರೆ ಎನ್ನಲಾಗುತ್ತಿತ್ತು. ನಾನೀಗ ಕಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನಟನೆಯಲ್ಲಿ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಉತ್ತೇಜನ ಸಿಕ್ಕಿದೆ ಮತ್ತು ಸಿನೆಮಾ ರಂಗ ಸ್ವಾಗತಿಸಿದೆ" ಎನ್ನುತ್ತಾರೆ. 
ತಾವು 8 ತಿಂಗಳು ಇರುವಾಗಲೇ ತಮ್ಮ ತಂದೆ ತೀರಿ ಹೋದರೂ, ನಗರದಲ್ಲಿ ಅವರನ್ನು ರಾಬಿನ್ ಹುಡ್ ರೀತಿಯಲ್ಲಿ ನೋಡುವರಿದ್ದಾರೆ ಎಂಬ ಅಂಶ ಅವರ ಜೊತೆಯಲ್ಲೇ ಉಳಿದುಕೊಂಡಿದೆಯಂತೆ, "ನನ್ನ ತಂದೆಯ ಬಗ್ಗೆ ಜನಕ್ಕೆ ಸಾಕಷ್ಟು ಅಂಶಗಳು ತಿಳಿದಿಲ್ಲ. ಅವುಗಳನ್ನು ಹೊರಗೆ ತರಬೇಕಿದೆ. ನನ್ನ ತಂದೆಯಲ್ಲಿ ಸಾಕಷ್ಟು ಒಳ್ಳೆಯತನವಿತ್ತು. ನನ್ನ ಪ್ರದೇಶದ ಬಳಿ ಒಂದು ಸ್ಲಮ್ ಇದೆ. ಅಲ್ಲಿ ಜನ ನನ್ನ ತಂದೆಯ ಫೋಟೋವನ್ನು ದೇವರ ಫೋಟೋದ ಪಕ್ಕದಲ್ಲಿ ಇಡುತ್ತಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದರು. ನನ್ನ ತಾಯಿ ಯಾರ ಸಹಾಯವನ್ನೂ ಪಡೆಯದೆ ನನ್ನನು ಈ ಹಂತಕ್ಕೆ ತಂದು ನಿಲ್ಲಿಸುವುದಕ್ಕೆ ಪಟ್ಟ ಪರಿಪಾಟಲು ನನಗೆ ತಿಳಿದಿದೆ" ಎನ್ನುತ್ತಾರೆ ಸಾಧಾರಣ ಯಶಸ್ಸು ಕಂಡ 'ಅಗಮ್ಯ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಅಜಿತ್. 
ತಮ್ಮ ಮೂರನೇ ಸಿನೆಮಾ 'ತ್ರತಕ' ಇಂದಿಂದಿದ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಕೂಡ ಅವರು ತಿಳಿಸುತ್ತಾರೆ. 'ಜಿಗರ್ಥಂಡ' ಆದಮೇಲೆ ಶಿವ ಗಣೇಶ್ ಅವರಿಗೆ ಇದು ಎರಡನೇ ಕನ್ನಡ ಸಿನೆಮಾ. ಈ ಸಿನೆಮಾ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ನಿರ್ಮಾಣವಾಗಲಿದೆಯಂತೆ. 
'ಆ ದಿನಗಳು' ಸಿನೆಮಾದಲ್ಲಿ ಅಜಿತ್ ಪಾತ್ರವೊಂದರಲ್ಲಿ ನಟಿಸಬೇಕಿತ್ತಂತೆ. ಆದರೆ ಆಗ ಅವರು ದೈಹಿಕವಾಗಿ ಇನ್ನು ಸಿದ್ಧಗೊಳ್ಳದೆ ಹೋದದ್ದರಿಂದ ಆ ಪಾತ್ರವನ್ನು ಚೇತನ್ ಪಡೆದುಕೊಂಡರಂತೆ. 
ತಮ್ಮ ತಂದೆಯ ಬಗೆಗಿನ ಚಿತ್ರವನ್ನು 'ಭಗತ್' ನಿರ್ದೇಶಿಸಲಿದ್ದಾರೆ ಎಂದು ಕೂಡ ಅಜಿತ್ ತಿಳಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com