ಕೆಲವು ತಂದೆಯಂದಿರು ತಮ್ಮ ಮಕ್ಕಳಿಗೆ ಅವರ ಕುಟುಂಬದ ವಿಷಯದಲ್ಲಿ, ಇನ್ನು ಕೆಲವರು ಮಕ್ಕಳ ವಿದ್ಯಾಭ್ಯಾಸ, ವೃತ್ತಿ ವಿಷಯದಲ್ಲಿ ಸಹಾಯ ಮಾಡುತ್ತಾರೆ. ಇನ್ನು ತಮ್ಮ ಮಕ್ಕಳ ಸ್ವಂತಿಕೆ, ಪ್ರತಿಭೆಯನ್ನು ಗುರುತಿಸಿ, ಪೋಷಿಸಿ ಬೆಳೆಸುವ ತಂದೆ-ತಾಯಂದಿರು ಕಡಿಮೆ.
ಖ್ಯಾತ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯಾ ಸರ್ಜಾ ಅವರ ಎರಡನೇ ಚಿತ್ರ ಪ್ರೇಮ ಬರಹದಲ್ಲಿ ಮಾಡಿರುವುದು ಅವರು ಮಾಡಿರುವುದು ಇದನ್ನು.
ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಅರ್ಜುನ್ ಸರ್ಜಾ ಅವರು ತಮ್ಮ ಮಗಳಿಗಾಗಿ ಚಿತ್ರ ತಯಾರಿಸುತ್ತಿದ್ದು ಶೂಟಿಂಗ್ ನಡೆಯುತ್ತಿದೆ. ಚಿತ್ರತಂಡ ಶೇಕಡಾ 50 ಭಾಗ ಚಿತ್ರೀಕರಣ ಮುಗಿಸಿದೆ.
ಇನ್ನು ಮೂರು ದಿನಗಳಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದ್ದು, ಐಶ್ವರ್ಯಾ ತಮ್ಮ ತಂದೆಯ ಜೊತೆ ಕೆಲಸ ಮಾಡುವ ಬಗ್ಗೆ ಕಾತರ ವ್ಯಕ್ತಪಡಿಸುತ್ತಾರೆ. ಪ್ರೇಮ ಬರಹ ಒಂದು ಪ್ರೀತಿಯ ಕಥೆಯಾಗಿದ್ದು ಇದೊಂದು ವಿಭಿನ್ನ ಕಥೆ ಎಂದು ಖಂಡಿತಾ ಹೇಳುತ್ತೇನೆ ಎನ್ನುತ್ತಾರೆ ಐಶ್ವರ್ಯಾ.
ಇದು ಐಶ್ವರ್ಯಾ ಅವರ ಅಭಿನಯದ ಎರಡನೇ ಚಿತ್ರವಾಗಿದ್ದು, ಕನ್ನಡದಲ್ಲಿ ಮೊದಲನೆಯದ್ದು. ನನ್ನ ಸಿನಿ ಪಯಣ ಈಗಷ್ಟೇ ಆರಂಭವಾಗಿದ್ದು, ನಟನೆಯಲ್ಲಿ ನನ್ನನ್ನು ತಿದ್ದಿಕೊಳ್ಳಲು, ಇನ್ನಷ್ಟು ಕಲಿಯಲು ಅವಕಾಶವಿದೆ ಎನ್ನುತ್ತಾರೆ.
ಚಿತ್ರದಲ್ಲಿ ಐಶ್ವರ್ಯಾಗೆ ಎದುರಾಗಿ ನಟ ಚಂದನ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಕೆ.ವಿಶ್ವನಾಥ್ ಚಿತ್ರದಲ್ಲಿ ತಾತನ ಪಾತ್ರ ನಿರ್ವಹಿಸಿದ್ದಾರೆ.