ಗೌತಮಿ, ಕಮಲ್ ಹಾಸನ್
ಸಿನಿಮಾ ಸುದ್ದಿ
ನಟ ಕಮಲ್ ಗೌತಮಿ 13 ವರ್ಷಗಳ ಲಿವೀಂಗ್ ಟುಗೆದರ್ ಸಂಬಂಧ ಅಂತ್ಯ
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಮತ್ತು ನಟಿ ಗೌತಮಿ ತಡಿಮಲ್ಲ ಅವರ 13 ವರ್ಷಗಳ ಲೀವಿಂಗ್ ಟುಗೆದರ್ ಸಂಬಂಧ ಅಂತ್ಯಗೊಂಡಿದೆ...
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಮತ್ತು ನಟಿ ಗೌತಮಿ ತಡಿಮಲ್ಲ ಅವರ 13 ವರ್ಷಗಳ ಲೀವಿಂಗ್ ಟುಗೆದರ್ ಸಂಬಂಧ ಅಂತ್ಯಗೊಂಡಿದೆ.
ನನ್ನ ಜೀವನದ ದುಃಖಕರ ವಿಚಾರವನ್ನು ಹೇಳಲು ಇಚ್ಚಿಸುವುದಿಲ್ಲ. ನಾನು ಮತ್ತು ಕಮಲ್ ಹಾಸನ್ ಇನ್ನು ಮಂದೆ ಜೊತೆಯಾಗಿರುವುದಿಲ್ಲ. 13 ವರ್ಷಗಳು ಜೊತೆಗಿದ್ದು ಈಗ ಬೇರಾಗುತ್ತಿರುವುದು ನಾನು ನನ್ನ ಜೀವನದಲ್ಲಿ ಕೈಗೊಂಡ ಅತ್ಯಂತ ಕಠಿಣ ನಿರ್ಧಾರವಾಗಿದೆ ಎಂದು ಗೌತಮಿ ಅವರು ಟ್ವೀಟರ್ ನಲ್ಲಿ ಸುರ್ದಿರ್ಘವಾಗಿ ವಿವರಣೆ ನೀಡಿದ್ದಾರೆ.
ಇನ್ನು ಕಮಲ್ ರಿಂದ ದೂರಾಗುತ್ತಿರುವುದರಿಂದ ಸಹಾನುಭೂತಿ ಪಡೆಯುವುದು ಅಥವಾ ಆಪಾದನೆ ಮಾಡುವುದು ನನ್ನ ಉದ್ದೇಶವಾಗಿಲ್ಲ. ಬದಲಾವಣೆಗಾಗಿ ನಾವು ದೂರವಾಗುತ್ತಿದ್ದೇವೆ. ಪ್ರತಿ ಮಾನವನ ಜೀವನದಲ್ಲಿ ಬದಲಾವಣೆ ಸ್ವಾಗತಾರ್ಹ ಎನ್ನುವುದನ್ನು ನನ್ನ ಜೀವನದಲ್ಲಿ ಕಂಡುಕೊಂಡಿದ್ದೇನೆ ಎಂದು ಬರೆದಿದ್ದಾರೆ.


