377 ನೇ ವಿಧಿ ಪ್ರಗತಿಹೀನ, ನಾಚಿಕೆಗೇಡು: ಸ್ವರ ಭಾಸ್ಕರ್

ಲೆಸ್ಬಿಯನ್, ಗೇ, ಬೈಸೆಕ್ಸುಯಲ್ ಮತ್ತು ಟ್ರಾನ್ಸ್ಜೆಂಡರ್ (ಎಲ್ ಜಿ ಬಿ ಟಿ - ಸಲಿಂಗ ಪ್ರೇಮ ಮತ್ತು ತೃತೀಯಲಿಂಗ) ಸಮುದಾಯವನ್ನು ಬೆಂಬಲಿಸಿರುವ ನಟಿ ಸ್ವರ ಭಾಸ್ಕರ್ ಸಂವಿಧಾನದ 377 ನೇ ವಿಧಿ
ನಟಿ ಸ್ವರ ಭಾಸ್ಕರ್
ನಟಿ ಸ್ವರ ಭಾಸ್ಕರ್
ಮುಂಬೈ: ಲೆಸ್ಬಿಯನ್, ಗೇ, ಬೈಸೆಕ್ಸುಯಲ್ ಮತ್ತು ಟ್ರಾನ್ಸ್ಜೆಂಡರ್ (ಎಲ್ ಜಿ ಬಿ ಟಿ - ಸಲಿಂಗ ಪ್ರೇಮ ಮತ್ತು ತೃತೀಯಲಿಂಗ) ಸಮುದಾಯವನ್ನು ಬೆಂಬಲಿಸಿರುವ ನಟಿ ಸ್ವರ ಭಾಸ್ಕರ್ ಸಂವಿಧಾನದ 377 ನೇ ವಿಧಿ ಪ್ರಗತಿಹೀನ, ನಾಚಿಕೆಗೇಡು ಎಂದಿದ್ದಾರೆ. 
ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರದಲ್ಲಿ ಭಾಗವಯಿಸಿದ್ದ ನಟಿ ಸ್ವರ ಅವರನ್ನು ಸಲಿಂಗಪ್ರೇಮಿಯ ಪಾತ್ರವನ್ನು ನೀವು ತೆರೆಯ ಮೇಲೆ ನಿರ್ವಹಿಸಲು ಸಿದ್ಧವೇ ಎಂಬ ಪ್ರಶ್ನೆಗೆ "ಹೌದು. ಯಾಕಿಲ್ಲ? ಗೇ ಹಕ್ಕುಗಳನ್ನು ಪ್ರತಿಪಾದಿಸುವ ಯಾವುದೇ ಒಳ್ಳೆಯ ಸ್ಕ್ರಿಪ್ಟ್ ಇದ್ದರು ನಾನು ನಟಿಸಲು ಸಿದ್ದ. ಸಂವಿಧಾನದ 377 ನೇ ವಿಧಿ ಪ್ರಗತಿಹೀನ, ನಾಚಿಕೆಗೇಡು ಮತ್ತು ಆಧುನಿಕ ಪೂರ್ವ. ಅದು ತೊಲಗಬೇಕು" ಎಂದು ಜವಾಹಾರ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ಪದವಿ ಪಡೆದಿರುವ 28 ವರ್ಷದ ನಟಿ ಹೇಳಿದ್ದಾರೆ. 
ತಾವು ಯಾರನ್ನು ಆದರ್ಶಪ್ರಾಯರನ್ನಾಗಿ ಕಾಣುತ್ತೀರಿ ಎಂಬ ಪ್ರಶ್ನೆಗೆ "ಒಬ್ಬರಿಲ್ಲ. ಮೆರಿಲ್ ಸ್ಟೀಪ್ ಮತ್ತು ಜೂಲಿಯಾನ್ ಮೂರ್ ನನ್ನ ವೃತ್ತಿಗೆ, ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿನ್ ನನ್ನ ಸಾರ್ವಜನಿಕ ಜೀವನಕ್ಕೆ ಆದರ್ಶ" ಎಂದಿದ್ದಾರೆ. 
ಸ್ಕ್ರಿಪ್ಟ್ ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಮದುವೆಯಾಗಯುವ ಬಗ್ಗೆ ಪ್ರಶ್ನಿಸಿದಾಗ ಸ್ವರ "ಸದ್ಯಕ್ಕೆ ಆ ರೀತಿಯ ಯಾವುದೇ ಯೋಜನೆಗಳಿಲ್ಲ! ನಿರ್ಧಾರ ಮಾಡಿದಾಗ ದೊಡ್ಡದಾಗಿ ಘೋಷಿಸಲಿದ್ದೇನೆ" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com