'ಮಾಸ್ತಿ ಗುಡಿ'ಗಾಗಿ 3ಡಿ ಮೊಬೈಲ್ ಗೇಮ್

ಮೊಬೈಲ್ ಆಪ್ ಸ್ಟೋರ್ ಗಳಲ್ಲಿ ಚಲನಚಿತ್ರ ಆಧಾರಿತ ಗೇಮ್ ಗಳು ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ, ಈ ಟ್ರೆಂಡ್ ಬಳಸಿಕೊಳ್ಳಲು 'ಮಾಸ್ತಿಗುಡಿ' ಚಿತ್ರತಂಡ ಮುಂದಾಗಿದೆ.
'ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್
'ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್
ಬೆಂಗಳೂರು: ಮೊಬೈಲ್ ಆಪ್ ಸ್ಟೋರ್ ಗಳಲ್ಲಿ ಚಲನಚಿತ್ರ ಆಧಾರಿತ ಗೇಮ್ ಗಳು ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ, ಈ ಟ್ರೆಂಡ್ ಬಳಸಿಕೊಳ್ಳಲು 'ಮಾಸ್ತಿಗುಡಿ' ಚಿತ್ರತಂಡ ಮುಂದಾಗಿದೆ. ಉತ್ತಮ ಗುಣಮಟ್ಟದ 3 ಡಿ ದೃಶ್ಯಗಳುಳ್ಳ ಈ ಗೇಮ್ ಅಭಿವೃದ್ಧಿಪಡಿಸಲು ನಿರ್ಮಾಪಕರು ವ್ಯಯಿಸುತ್ತಿರುವ ಮೊತ್ತ 30 ಲಕ್ಷ!
ಕನ್ನಡ ಸಿನೆಮಾ ರಂಗದಲ್ಲಿ ಸಿನೆಮಾ ಆಧಾರಿತ 3 ಡಿ ಗೇಮ್ ಆಪ್ ಇದೆ ಮೊದಲು ಎನ್ನುತ್ತಾರೆ ಈ ಗೇಮ್ ಹೊರತರುತ್ತಿರುವ ನಿರ್ಮಾಪಕ ಸುಂದರ್ ಪಿ ಗೌಡ್ರು. 
"ಮಾಸ್ತಿ ಗುಡಿ ಗೇಮ್ ನಲ್ಲಿ ಏಳು ಹಂತಗಳಿರುತ್ತವೆ ಮತ್ತು ಪ್ರತಿ ಹಂತದಲ್ಲಿ 10 ಉಪಹಂತಗಳಿರಲಿವೆ. ಇನ್ಫ್ಯಾಂಟ್ ಸ್ಟುಡಿಯೋ ಈ ಗೇಮ್ ಅಭಿವೃದ್ಧಿಪಡಿಸುತ್ತಿದೆ" ಎನ್ನುತ್ತಾರೆ ನಿರ್ಮಾಪಕ. 
ಸುಂದರ್ ಹೇಳುವಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಗೇಮ್ ಬಿಡುಗಡೆಯಾಗಲಿದ್ದು, ದುನಿಯಾ ವಿಜಯ್, ಅಮೂಲ್ಯ, ಕೀರ್ತಿ ಕರಬಂಧ ಮತ್ತು ರವಿಶಂಕರ್ ಒಳಗೊಂಡಂತೆ ಸುಮಾರು 8 ರಿಂದ 10 ಸಿನೆಮಾದ ಪಾತ್ರಗಳು ಇರಲಿವೆಯಂತೆ. 
"ಪ್ರತಿ ಪಾತ್ರವನ್ನು ವಿನ್ಯಾಸ ಮಾಡುವುದಕ್ಕೆ ನಮಗೆ 50 ಸಾವಿರ ರೂ ತಗುಲಿದೆ. ಸದ್ಯಕ್ಕೆ ಹೀರೊ ಮತ್ತು ಇಬ್ಬರು ವಿಲನ್ ಪಾತ್ರಗಳ ವಿನ್ಯಾಸ ಮುಗಿಸಿದ್ದಾರೆ. ಉಳಿದ ಕೆಲಸ ನಡೆಯುತ್ತಿದೆ. ಈ ಗೇಮ್ ಸಿನೆಮಾದ ವಿಷಯಕ್ಕೆ ಸಂಬಂಧಿಸಿದ್ದು. ನಾವು ಆರು ಹಂತಗಳ ಈ ಗೇಮ್ ಅನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಮತ್ತು ಏಳನೇ ಹಂತ 'ಮಾಸ್ತಿ ಗುಡಿ' ಸಿನೆಮಾದ ಬಿಡುಗಡೆಯ ದಿನ ಲೋಕಾರ್ಪಣೆಗೊಳಿಸಲಿದ್ದೇವೆ. ಎಲ್ಲ ಮೊಬೈಲ್ ನೆಟ್ ವರ್ಕ್ ಗಳಲ್ಲೂ ಈ ಗೇಮ್ ಸಿಗಲಿದೆ ಮತ್ತು ಗೂಗಲ್ ಪ್ಲೇಸ್ಟೋರ್ ನಿಂದ ಇದನ್ನು ಇಳಿಸಿಕೊಳ್ಳಬಹುದು. ಶೀಘ್ರದಲ್ಲೇ ಸಿನೆಮಾದ ಪ್ರಮೋ ಬಿಡುಗಡೆ ಮಾಡಿ, ಗೇಮ್ ನ ವಿವಿಧ ಹಂತಗಳನ್ನು ಬಿಡುಗಡೆ ಮಾಡಲಿದ್ದೇವೆ. ಹಾಗೆಯೇ ಈ ಗೇಮಿಂಗ್ ಆಪ್ ನಲ್ಲಿ ಸಿನೆಮಾದ ಕ್ಲಿಪ್ಪಿಂಗ್ ಗಳು, ಮೇಕಿಂಗ್ ವಿಡಿಯೋಗಳನ್ನು ಸೇರಿಸಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದ್ದೇವೆ" ಎನ್ನುತ್ತಾರೆ ಸುಂದರ್. 
ನಾಗಶೇಖರ್ ನಿರ್ದೇಶನದ ಈ ಸಿನೆಮಾದಲ್ಲಿ ದೇವರಾಜ್, ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲಾ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮತ್ತು ಶರತ್ ಲೋಹಿತಾಶ್ವ ಕೂಡ ನಟಿಸುತ್ತಿರುವುದು ವಿಶೇಷ. ಸಾಧುಕೋಕಿಲಾ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com