'ಗಾಂಧಿಗಿರಿ', 'ಜೋಗಿ' ಸಿನೆಮಾದ ಮಾಂತ್ರಿಕತೆಯನ್ನು ಮರುಕಳಿಸಲಿದೆ: ರಘು ಹಾಸನ್

ಸಿನೆಮಾ ಗೆಲ್ಲಿಸುವ ಜೋಡಿ ಹೀರೊ-ಹೀರೋಯಿನ್ನೇ ಆಗಬೇಕಿಲ್ಲ, ಎಷ್ಟೋ ಬಾರಿ ತಾಯಿ-ಮಗನ ಪಾತ್ರಗಳು ಶಕ್ತಿಯುತವಾಗಿದ್ದು ಸಿನೆಮಾ ಗೆಲುವಿಗೆ ಧಾರಾಳವಾಗಿ ಸಹಕರಿಸುತ್ತವೆ.
'ಗಾಂಧಿಗಿರಿ'ಯಲ್ಲಿ ಅರುಂಧತಿ ನಾಗ್ ಮತ್ತು ಪ್ರೇಮ್
'ಗಾಂಧಿಗಿರಿ'ಯಲ್ಲಿ ಅರುಂಧತಿ ನಾಗ್ ಮತ್ತು ಪ್ರೇಮ್
ಬೆಂಗಳೂರು: ಸಿನೆಮಾ ಗೆಲ್ಲಿಸುವ ಜೋಡಿ ಹೀರೊ-ಹೀರೋಯಿನ್ನೇ ಆಗಬೇಕಿಲ್ಲ, ಎಷ್ಟೋ ಬಾರಿ ತಾಯಿ-ಮಗನ ಪಾತ್ರಗಳು ಶಕ್ತಿಯುತವಾಗಿದ್ದು ಸಿನೆಮಾ ಗೆಲುವಿಗೆ ಧಾರಾಳವಾಗಿ ಸಹಕರಿಸುತ್ತವೆ. 
'ಗಾಂಧಿಗಿರಿ' ಸಿನೆಮಾ ನಿರ್ದೇಶಿಸುತ್ತಿರುವ ರಘು ಹಾಸನ್, ಅರುಂಧತಿ ನಾಗ್ ಮತ್ತು ಪ್ರೇಮ್ ತಾಯಿ ಮಗನ ಪಾತ್ರಗಳಲ್ಲಿ 'ಜೋಗಿ' ಸಿನೆಮಾದ ಮಾಂತ್ರಿಕತೆಯನ್ನು ಹಿಂದಕ್ಕೆ ತರಲಿದ್ದಾರೆ ಎನ್ನುತ್ತಾರೆ. 
"ತಾಯಿ ಮತ್ತು ಮಗನಾಗಿ, ಅವರಿಬ್ಬರೂ, 'ಜೋಗಿ' ಸಿನೆಮಾದಲ್ಲಿ ಗೆದ್ದಿದ್ದ ಶಿವರಾಜಕುಮಾರ್ ಮತ್ತು ಅರುಂಧತಿ ಅವರ ಭಾವನಾತ್ಮಕ ಆಪ್ತತೆಯನ್ನು ಇಲ್ಲಿಯೂ ಮೂಡಿಸಲಿದ್ದಾರೆ" ಎನ್ನುತ್ತಾರೆ ರಘು. 
"ನಟಿ ವಿರಳವಾಗಿ ಸಿನೆಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರೆ ಮತ್ತೀಗ ದೀರ್ಘ ಸಮಯದ ನಂತರ ಹಿಂದಿರುಗಿದ್ದಾರೆ. ಅವರು ನಮ್ಮ ಸಿನೆಮಾ ಒಪ್ಪಿಕೊಂಡಿದ್ದಕ್ಕೆ ನಾನು ಅದೃಷ್ಟವಂತ ಎಂದೇ ತಿಳಿದಿದ್ದೇನೆ. ಅವರ ನಟನೆಯನ್ನು ನೋಡುವುದೇ ಚಂದ ಮತ್ತು ಯಾವುದೇ ಪಾತ್ರಕ್ಕೆ ಆಳವನ್ನು ತಂದುಕೊಡುತ್ತಾರೆ" ಎನ್ನುತ್ತಾರೆ ನಿರ್ದೇಶಕ. 
"ಅರುಂಧತಿ ಅವರ ಪಾತ್ರಕ್ಕೆ ಎರಡು ಛಾಯೆಗಳಲಿದ್ದು ಅವುಗಳು ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಅವುಗಳು ಕಾಣಿಸಿಕೊಳ್ಳಲಿವೆ" ಎಂದು ಕೂಡ ನಿರ್ದೇಶಕ ಹೇಳಿದ್ದು, ಈಗಾಗಲೇ 25 ದಿನಗಳ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. "ಕಾವೇರಿ ಗಲಾಟೆಯಿಂದ ನಾವು ಚಿತ್ರೀಕರಣವನ್ನು ಕೆಲವು ದಿನಗಳವರೆಗೆ ನಿಲ್ಲಿಸಿದ್ದೆವು. ಮೈಸೂರಿನಲ್ಲಿ 7 ದಿನಗಳ ಚಿತ್ರೀಕರಣ ಬಾಕಿ ಇದೆ. ಸಹಜ ಸ್ಥಿತಿಗೆ ಮರಳಿದ ಮೇಲೆ ಅದನ್ನು ಮುಗಿಸಲಿದ್ದೇವೆ. ಸದ್ಯಕ್ಕೆ 'ದ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ನಲ್ಲಿ ಜಾಗಗಳನ್ನು ಹುಡುಕುತ್ತಿರುವ ಪ್ರೇಮ್ ಹಿಂದಿರುಗಿದ ಮೇಲೆ ಉಳಿದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ" ಎಂದು ಅವರು ತಿಳಿಸುತ್ತಾರೆ. 
'ಗಾಂಧಿಗಿರಿ'ಯಲ್ಲಿ ರಾಗಿಣಿ ದ್ವಿವೇದಿ ನಾಯಕನಟಿಯಾಗಿದ್ದು, ಅವರು ಇಂಗ್ಲಿಷ್ ಅಧ್ಯಾಪಕಿಯ ಪಾತ್ರ ನಿರ್ವಹಿಸಿದ್ದಾರೆ. ಕುರಿ ಪ್ರತಾಪ್ ಮತ್ತು ರಂಗಾಯಣ ರಘು ಕೂಡ ತಾರಾಗಣದ ಭಾಗವಾಗಿದ್ದಾರೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com