ಸುಬ್ಬುಲಕ್ಷ್ಮಿ 100 ನೇ ಜಯಂತಿಗೆ ಗೌರವ ಸಲ್ಲಿಸಿದ ಲತಾ ಮಂಗೇಶ್ಕರ್

ಕರ್ನಾಟಕ ಸಂಗೀತದ ದಂತಕತೆ ದಿವಂಗತ ಎಂ ಎಸ್ ಸುಬ್ಬುಲಕ್ಷ್ಮಿ ಅವರ 100 ನೇ ಜಯಂತಿಯ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಶುಕ್ರವಾರ ಗೌರವ ಸಲ್ಲಿಸಿದ್ದಾರೆ.
ಕರ್ನಾಟಕ ಸಂಗೀತದ ದಂತಕತೆ ದಿವಂಗತ ಎಂ ಎಸ್ ಸುಬ್ಬುಲಕ್ಷ್ಮಿ
ಕರ್ನಾಟಕ ಸಂಗೀತದ ದಂತಕತೆ ದಿವಂಗತ ಎಂ ಎಸ್ ಸುಬ್ಬುಲಕ್ಷ್ಮಿ
Updated on
ಮುಂಬೈ: ಕರ್ನಾಟಕ ಸಂಗೀತದ ದಂತಕತೆ ದಿವಂಗತ ಎಂ ಎಸ್ ಸುಬ್ಬುಲಕ್ಷ್ಮಿ ಅವರ 100 ನೇ ಜಯಂತಿಯ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಶುಕ್ರವಾರ ಗೌರವ ಸಲ್ಲಿಸಿದ್ದಾರೆ. 
"ಇಂದು ದಂತಕಥೆ ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಜನ್ಮ ಶತಾಬ್ದಿ. ಅವರ ಸುಶ್ರಾವ್ಯ ಹಾಡುಗಳಿಗೆ, ವ್ಯಕ್ತಿತ್ವಕ್ಕೆ ತಲೆಬಾಗುತ್ತೇನೆ" ಎಂದು ಗುರುವಾರ ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ. 
ಮದ್ರಾಸ್ ಪ್ರಾಂತ್ಯದ ಮಧುರೈನಲ್ಲಿ ಸೆಪ್ಟೆಂಬರ್ 16, 1916 ರಲ್ಲಿ ಜನಿಸಿದ್ದ ಸುಬ್ಬುಲಕ್ಷ್ಮಿ ಮೊದಲಿಗೆ ತಮ್ಮ ತಾಯಿಯವರಿಂದಲೇ ಕರ್ನಾಟಕ ಸಂಗೀತ ಕಲಿತವರು. ತಮ್ಮ 10 ನೇ ವಯಸ್ಸಿನಲ್ಲಿಯೇ 1926 ರಲ್ಲಿ ಅವರ ಗಾಯನದ ಮೊದಲ ಆಲ್ಬಮ್ ಬಿಡುಗಡೆಯಾಗಿತ್ತು. 
ವಿಶ್ವದಾದ್ಯಂತ ಸಂಗೀತ ಕಛೇರಿಗಳನ್ನು ನೀಡಿ ರಸಿಕರ ಮನಗೆದ್ದಿದ್ದ ಸುಬ್ಬುಲಕ್ಷ್ಮಿ ಅವರಿಗೆ ಭಾರತ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು 1998 ರಲ್ಲಿ ನೀಡಿ ಗೌರವಿಸಲಾಗಿತ್ತು. ಇವರಿಗೆ 1974 ರಲ್ಲಿ ರಾಮೊನ್ ಮ್ಯಾಗ್ಸಸ್ಸೇ ಪ್ರಶಸ್ತಿ ಕೂಡ ದೊರಕಿತ್ತು. 
8 ದಶಕಗಳ ತಮ್ಮ ವೈಭವಯುತ ಗಾಯನ ಜೀವನದ ನಂತರ ಚೆನ್ನೈನಲ್ಲಿ ಡಿಸೆಂಬರ್ 2004 ರಲ್ಲಿ ಸುಬ್ಬುಲಕ್ಷ್ಮಿ ನಿಧನರಾದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com