

ಚೆನ್ನೈ: 2016ರ ಬ್ಲಾಕ್ ಬಸ್ಟರ್ ಚಿತ್ರಗಳಾದ ತಮಿಳಿನ ಥೇರಿ, ತೆಲುಗಿನ ಅ...ಅಅ ಮತ್ತು ಜನತಾ ಗ್ಯಾರೇಜ್ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಚಿತ್ರರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಇರುವುದಿಲ್ಲ ಇದು ಮನಸಿಗೆ ನೋವುಂಟು ಮಾಡಿದೆ. ದಕ್ಷಿಣದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಸಿಗುವುದು ಎಷ್ಟು ಕಷ್ಟ ಎಂಬುದು ಮನವರಿಕೆಯಾಗಿದೆ ಎಂದು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
Advertisement