
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಕನ್ನಡಪರ ಸಂಘಟನೆಗಳು ನೀಡಿದ್ದ ಬಂದ್ ಗೆ ಬೆಂಬಲ ಸೂಚಿಸಿದ್ದ ಚಿತ್ರರಂಗದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮಿಳುನಾಡು ವಿರುದ್ಧ ಪ್ರತಿಭಟಿಸಿದ್ದ ನಟಿ ಮಾಳವಿಕ ಅವಿನಾಶ್ ಇದೀಗ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಹೊಗಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ.
ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಅನ್ನಿ ಧಾರಾವಾಹಿಯಲ್ಲಿ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದರು. ಈ ಧಾರಾವಾಹಿಯನ್ನು ಜಯಲಲಿತಾ ಅವರು ತಪ್ಪದೆ ನೋಡುತ್ತಾರೆ. ಅಲ್ಲದೆ, ಲೈವ್ ನೋಡಲು ಆಗದಿದ್ದರೂ ವಿಎಚ್ಎಸ್ ತರಿಸಿಕೊಂಡು ನೋಡುತ್ತಾರೆ.
ಅನ್ನಿ ಧಾರಾವಾಹಿ ಮೂಲಕ ತಮಿಳರ ಹೃದಯದಲ್ಲಿ ಸ್ಥಾನ ಪಡೆಯುತ್ತೇನೆ ಎನ್ನುವ ವಿಶ್ವಾಸ ತಮಗಿದೆ ಎಂದು ಸ್ಟೇಟಸ್ ಆಗಿದ್ದರು. ಇದಕ್ಕೆ ಕನ್ನಡಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದರಿಂದ ಮಾಳವಿಕಾ ಕನ್ನಡಿಗರ ಕ್ಷಮೆ ಕೇಳುತ್ತೇನೆ. ಫೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ಡಿಲೀಟ್ ಮಾಡುತ್ತೇನೆ ನನ್ನು ತಪ್ಪಾಯಿತು ಎಂದು ಹೇಳಿದ್ದಾರೆ.
Advertisement