ಚೊಚ್ಚಲ ಚಿತ್ರ 'ಸಿಪಾಯಿ'ಯಲ್ಲಿ ಕರಾಟೆ ಕೌಶಲ್ಯವನ್ನು ಪ್ರದರ್ಶಿಸಲಿರುವ ಸಿದ್ಧಾರ್ಥ್

ಇಂಜಿನಿಯರ್ ಗಳಾಗಿದ್ದು ನಟರಾಗಿ ವೃತ್ತಿ ಬದಲಿಕೊಂಡವರ ಕ್ಲಬ್ ಗೆ ಸಿದ್ಧಾರ್ಥ್ ಶೀಘ್ರದಲ್ಲೇ ಸೇರಲಿದ್ದಾರೆ. ಅವರ ನಟನೆಯ 'ಸಿಪಾಯಿ' ಬಿಡುಗಡೆಗೆ ಸಿದ್ಧವಾಗಿದೆ.
'ಸಿಪಾಯಿ'ಯಲ್ಲಿ ಸಿದ್ಧಾರ್ಥ್ ಮತ್ತು ಶ್ರುತಿ ಹರಿಹರನ್
'ಸಿಪಾಯಿ'ಯಲ್ಲಿ ಸಿದ್ಧಾರ್ಥ್ ಮತ್ತು ಶ್ರುತಿ ಹರಿಹರನ್
ಬೆಂಗಳೂರು: ಇಂಜಿನಿಯರ್ ಗಳಾಗಿದ್ದು ನಟರಾಗಿ ವೃತ್ತಿ ಬದಲಿಕೊಂಡವರ ಕ್ಲಬ್ ಗೆ ಸಿದ್ಧಾರ್ಥ್ ಶೀಘ್ರದಲ್ಲೇ ಸೇರಲಿದ್ದಾರೆ. ಅವರ ನಟನೆಯ 'ಸಿಪಾಯಿ' ಬಿಡುಗಡೆಗೆ ಸಿದ್ಧವಾಗಿದೆ.
ಎಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ಪಮ್ಮ ಪೋಷಕರ ಆಸೆಯನ್ನು ಪೂರೈಸಿ, ನಿರ್ದೇಶನ ಮತ್ತು ಅನಿಮೇಷನ್ ನಲ್ಲಿ ಎಂ ಎಸ್ ಸಿ ಪದವಿ ಪಡೆದು, ಅಭಿನಯ ತರಂಗ ದಲ್ಲಿ ನಟನೆಯಲ್ಲಿ ತರಬೇತಿ ಪಡೆದು ಈಗ ಸಿನೆಮಾಗೆ ಪಾದಾರ್ಪಣೆ ಮಾಡಿದ್ದಾರೆ ಸಿದ್ಧಾರ್ಥ್. "ನಟನೆ ನನ್ನ ಪ್ಯಾಷನ್, ಈಗ ಅದನ್ನು ಸಾಕಾರಗೊಳಿಸಿಕೊಳ್ಳಲು ಬಂದಿದ್ದೇನೆ" ಎಂದು ಈ ಸಿನೆಮಾದ ನಿರ್ಮಾಪಕರು ಕೂಡ ಆಗಿರುವ ಸಿದ್ಧಾರ್ಥ್ ತಿಳಿಸುತ್ತಾರೆ.
'ಲೂಸಿಯಾ' ಸಿನೆಮಾದದಲ್ಲಿ ಹೂಡಿಕೆ ಮಾಡಿದ್ದಾಗ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡೆ ಎನ್ನುವ ಸಿದ್ಧಾರ್ಥ್, ಆಗ ನಿರ್ದೇಶಕ ಪವನ್ ಕುಮಾರ್ ಅವರಿಗೆ ಸಹ ನಿರ್ದೇಶಕರಾಗಿದ್ದ ರಾಜ್ಯರಜತ್ ಮೈಯ್ಯ ಅವರನ್ನು ಭೇಟಿ ಮಾಡಿದ್ದು ಎಂದು ತಿಳಿಸುತ್ತಾರೆ. "ನಾನು ಲೂಸಿಯಾ ತಂಡದ ಜೊತೆಗೆ ನಿಕಟ ಸಂಪರ್ಕದಲ್ಲಿದ್ದೆ ಮತ್ತು ರಜತ್ ಕೆಲಸವನ್ನು ಇಷ್ಟ ಪಟ್ಟಿದ್ದೆ. ಆ ಸಮಯದಲ್ಲಿ ನನಗೆ ಒಳ್ಳೆಯ ಸಿನೆಮಾ ನೀಡಬಲ್ಲ ಒಬ್ಬ ನಿರ್ದೇಶಕನಿಗೆ ಹುಡುಕಾಡುತ್ತಿದ್ದೆ. ನಂತರ ಪರಸ್ಪರ ಚರ್ಚೆ ಮಾಡಿ ಇಬ್ಬರು ಒಟ್ಟಿಗೆ ಬಂದೆವು" ಎಂದು ಸಿದ್ಧಾರ್ಥ್ ವಿವರಿಸುತ್ತಾರೆ. 
ಹಾಗೆಯೇ ಈ ಸಿನೆಮಾದಲ್ಲಿ ತಾವು ಕೂಡ ನಟಿಸುತ್ತಿರುವ ರಜತ್, ಸಿದ್ಧಾರ್ಥ್ ಅವರಿಗೆ ಆಕ್ಷನ್ ಸಿನೆಮಾ ಮಾಡಲು ನಿಶ್ಚಯಿಸಿದರಂತೆ. ಕಾರಣ ಸಿದ್ದಾರ್ಥ್ ಅವರು ಕರಾಟೆಯಲ್ಲಿ ಪಳಗಿರುವುದು. "ನಾನು 2007 ಭಾರತವನ್ನು ಪ್ರತಿನಿಧಿಸಿ ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದೆ. ಅದನ್ನು ತಿಳಿದ ರಜತ್, ನನ್ನ ಕರಾಟೆ ಕೌಶಲ್ಯವನ್ನು ಪ್ರದರ್ಶಿಸಲು ಆಕ್ಷನ್ ಸಿನೆಮಾ ಮಾಡಲು ನಿಶ್ಚಯಿಸಿದರು" ಎನ್ನುತ್ತಾರೆ ಸಿದ್ಧಾರ್ಥ್. 
ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ಕೂಡ ನಟಿಸಿರುವ ಈ ಸಿನೆಮಾದಲ್ಲಿ ಸಿದ್ಧಾರ್ಥ್ ಟಿವಿ ವರದಿಗಾರನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ನಟ ಅಚ್ಯುತ್ ಕುಮಾರ್ ಸಿದ್ಧಾರ್ಥ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com