ತಮಿಳು ಸಿನೆಮಾ 'ವಿಸಾರಣೈ' ಆಸ್ಕರ್ ಸ್ಪರ್ಧೆಗೆ ಭಾರತದ ಅಧಿಕೃತ ಆಯ್ಕೆ

ರಾಷ್ಟ್ರಪ್ರಶಸ್ತಿ ವಿಜೇತ, ವೆಟ್ರಿಮಾರನ್ ಅವರನಿರ್ದೇಶನದ ತಮಿಳು ಸಿನೆಮಾ 'ವಿಸಾರಣೈ', ಆಸ್ಕರ್ 2017 ವಿದೇಶಿ ಸಿನೆಮಾಗಳ ಪ್ರಕಾರಕ್ಕೆ ಭಾರತದ ಅಧಿಕೃತ ಆಯ್ಕೆಯಾಗಿ ಹೊರಹೊಮ್ಮಿದೆ.
'ವಿಸಾರಣೈ' ಸಿನೆಮಾದ ಸ್ಟಿಲ್
'ವಿಸಾರಣೈ' ಸಿನೆಮಾದ ಸ್ಟಿಲ್
ಹೈದರಾಬಾದ್: ರಾಷ್ಟ್ರಪ್ರಶಸ್ತಿ ವಿಜೇತ, ವೆಟ್ರಿಮಾರನ್ ಅವರನಿರ್ದೇಶನದ ತಮಿಳು ಸಿನೆಮಾ 'ವಿಸಾರಣೈ', ಆಸ್ಕರ್ 2017 ವಿದೇಶಿ ಸಿನೆಮಾಗಳ ಪ್ರಕಾರಕ್ಕೆ ಭಾರತದ ಅಧಿಕೃತ ಆಯ್ಕೆಯಾಗಿ ಹೊರಹೊಮ್ಮಿದೆ. ಇದನ್ನು ಗುರುವಾರ ಘೋಷಿಸಲಾಗಿದೆ. 
"ಸ್ಪರ್ಧೆಯಲ್ಲಿದ್ದ 29 ಸಿನೆಮಾಗಳ ಪೈಕಿ, 'ವಿಸಾರಣೈ' ಸಿನೆಮಾವನ್ನು ಒಮ್ಮತವಾಗಿ ಆಯ್ಕೆ ಮಾಡಲಾಯಿತು" ಎಂದು ನಿರ್ದೇಶಕ ಕೇತನ್ ಮೆಹ್ತಾ ಹೇಳಿದ್ದಾರೆ. 
"ನಾವು ಮೋಡದ ಮೇಲೆ ತೇಲುತ್ತಿದ್ದೇವೆ!! ಆಸ್ಕರ್ಸ್ ಗೆ 'ವಿಸಾರಣೈ' ಭಾರತವನ್ನು ಪ್ರತಿನಿಧಿಸಲಿದೆ" ಎಂದು ವೆಟ್ರಿಮಾರನ್ ಅವರ ಗ್ರಾಸ್ ರೂಟ್ ಫಿಲಂ ಕಂಪನಿ ಬ್ಯಾನರ್ ಟ್ವೀಟ್ ಮಾಡಿದ್ದೆ. 
'ವಿಸಾರಣೈ' ನಲ್ಲಿ ದಿನೇಶ್, ಸಮುದ್ರಕಿನಿ, ಅಜಯ್ ಘೋಷ್ ಮತ್ತು ಕಿಶೋರ್ ನಟಿಸಿದ್ದಾರೆ. ಪೋಲೀಸರ ದೌರ್ಜನ್ಯದ ಕುರಿತು ಆಟೋ ರಿಕ್ಷಾ ಚಾಲಕ ಎಂ ಚಂದ್ರಶೇಖರ್ ಬರೆದಿದ್ದ ನೈಜ ಕಥಾನಕ 'ಲಾಕ್ ಅಪ್' ಎಂಬ ಕಾದಂಬರಿ ಆಧಾರಿತ ಚಿತ್ರ ಇದು. 
ವಿಮರ್ಶಕರ ಹಾಗು ಜನ ಮೆಚ್ಚುಗೆ ಪಡೆದಿದ್ದ ಈ ಸಿನೆಮಾ ವೆನಿಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಧನುಷ್ ಈ ಸಿನೆಮಾದ ನಿರ್ಮಾಪಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com