ಸಾಂದರ್ಭಿಕ ಚಿತ್ರ
ಸಿನಿಮಾ ಸುದ್ದಿ
'ಹವಾಮಾನ ವೈಪರೀತ್ಯ'ದ ಬಗ್ಗೆ ಚರ್ಚಿಸಲಿರುವ ಒಬಾಮ, ಡಿಕ್ಯಾಪ್ರಿಯೊ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಟ ಲಿಯಾನಾರ್ಡೋ ಡಿಕ್ಯಾಪ್ರಿಯೊ, ಶ್ವೇತ ಭವನದಲ್ಲಿ ಮುಂದಿನ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ 'ಹವಾಮಾನ ವೈಪರೀತ್ಯ'
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಟ ಲಿಯಾನಾರ್ಡೋ ಡಿಕ್ಯಾಪ್ರಿಯೊ, ಶ್ವೇತ ಭವನದಲ್ಲಿ ಮುಂದಿನ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ 'ಹವಾಮಾನ ವೈಪರೀತ್ಯ' ಮತ್ತು ಅದಕ್ಕೆ ಪರಿಹಾರ ಹುಡುಕುವುದರ ಬಗ್ಗೆ ಚರ್ಚಿಸಲಿದ್ದಾರೆ.
ಶ್ವೇತ ಭವನ ಐಡಿಯಾಗಳ ಉತ್ಸವದಲ್ಲಿ, ಹವಾಮಾನ ವಿಜ್ಞಾನಿ ಡಾ. ಕ್ಯಾಥರಿನ್ ಹೆಹೋ ಜೊತೆಗೆ ಅವರಿಬ್ಬರೂ ಪಾಲ್ಗೊಂಡು "ಮುಂದಿನ ಪೀಳಿಗೆಗೆ ನಮ್ಮ ಗ್ರಹವನ್ನು ಉಳಿಸುವುದರ ಪ್ರಾಮುಖ್ಯತೆ' ಬಗ್ಗೆ ಚರ್ಚಿಸಲಿದ್ದಾರೆ ಎಂದು ಹಾಲಿವುಡ್ ರಿಪೋರ್ಟರ್.ಕಾಮ್ ವರದಿ ಮಾಡಿದೆ.
ನಂತರ ಡಿಕ್ಯಾಪ್ರಿಯೋ ಅವರ ನೂತನ ಸಾಕ್ಷ್ಯಚಿತ್ರ 'ಬಿಫೋರ್ ದ ಫ್ಲಡ್' (ಪ್ರವಾಹಕ್ಕಿಂತಲೂ ಮೊದಲು) ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕರ್ಮ ಶ್ವೇತ ಭವನದ ಅಂತರ್ಜಾಲ ತಾಣದಲ್ಲೂ ನೇರಪ್ರಸಾರಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ