ಮೂರನೇ ಬಾರಿಗೆ ಒಂದಾದ ಚಿರಂಜೀವಿ ಸರ್ಜಾ ಮತ್ತು ಚೈತನ್ಯ

ಕಳೆದ ವರ್ಷ 'ಆಟಗಾರ' ಸಿನೆಮಾದ ಯಶಸ್ಸು, ನಟ ಚಿರಂಜೀವಿ ಸರ್ಜಾ ಮತ್ತು ನಿರ್ದೇಶಕ ಚೈತನ್ಯ ಅವರ ಜೋಡಿಯ ಮೇಲೆ ನಿರ್ಮಾಪಕರಿಗೆ ಭರವಸೆ ಮೂಡಿಸಿದೆ. ಈಗ ಸದ್ಯಕ್ಕೆ ಭಾರತ-ಬ್ರಿಟಿಷ್ ನಿರ್ಮಾಣ
ನಟ ಚಿರಂಜೀವಿ ಸರ್ಜಾ
ನಟ ಚಿರಂಜೀವಿ ಸರ್ಜಾ
Updated on
ಬೆಂಗಳೂರು: ಕಳೆದ ವರ್ಷ 'ಆಟಗಾರ' ಸಿನೆಮಾದ ಯಶಸ್ಸು, ನಟ ಚಿರಂಜೀವಿ ಸರ್ಜಾ ಮತ್ತು ನಿರ್ದೇಶಕ ಚೈತನ್ಯ ಅವರ ಜೋಡಿಯ ಮೇಲೆ ನಿರ್ಮಾಪಕರಿಗೆ ಭರವಸೆ ಮೂಡಿಸಿದೆ. ಈಗ ಸದ್ಯಕ್ಕೆ ಭಾರತ-ಬ್ರಿಟಿಷ್ ನಿರ್ಮಾಣ ಸಹಯೋಗದಲ್ಲಿ ಈ ಜೋಡಿ ಸಿನೆಮಾವೊಂದರಲ್ಲಿ ನಿರತವಾಗಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇದರ ನಂತರ ಈ ಜೋಡಿ ಮತ್ತೊಂದು ಸಿನೆಮಾ ಮಾಡಲಿದೆ. ಈ ವರ್ಷದ ಡಿಸೆಂಬರ್ ನಿಂದ ಈ ನೂತನ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಧೃಢೀಕರಿಸಿದ್ದಾರೆ ಚಿರು.
"ನಾನು ಸ್ಕ್ರಿಪ್ಟ್ ಗೆ ಮಾರುಹೋದೆ. ಮತ್ತು ಇದು ಪ್ರೇಕ್ಷಕರಿಗೆ ಖಂಡಿತಾ ಉತ್ಸಾಹ ಮೂಡಿಸಲಿದೆ. ಇದು ಅತ್ಯುತ್ತಮ ಸ್ಕ್ರೀನ್ ಪ್ಲೆ ಆಗಿದ್ದು, ಪ್ರತಿ ಫ್ರೇಮ್ ನಲ್ಲೂ ಆಸಕ್ತಿದಾಯಕ ಸಂಗತಿಗಳಿವೆ" ಎನ್ನುತಾತರೆ ಚಿರು. 
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ-ನಟ ಯಶಸ್ವಿ ಜೋಡಿ ಒಂದರ ಹಿಂದೆ ಮತ್ತೊಂದು ಸಿನೆಮಾವನ್ನು ಮಾಡಿದ್ದು ಅತಿ ವಿರಳ. ಇಬ್ಬರ ನಡುವೆ ಒಳ್ಳೆ ಬಾಂಧವ್ಯ ಇದ್ದು ಇದರಿಂದ ಕೆಲಸ ಮಾಡುವುದು ಸುಲಭ ಎನ್ನುವ ಚಿರು "'ಆಟಗಾರ' ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಡ್ ಬೆಳೆಯಿತು ಅದು ಸೃಜನಶೀಲವಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಅಲ್ಲದೆ ಚೈತನ್ಯ ಬರೆಯುವ ಸ್ಕ್ರಿಪ್ಟ್ ಗಳು ನನಗೇ ಬರೆದಂತಿರುತ್ತವೆ. ಹಾಗೆಯೇ ಪ್ರತಿ ಹಂತದಲ್ಲೂ ಅವರು ನನ್ನೊಂದಿಗೆ ಚರ್ಚಿಸುತ್ತಾರೆ ಮತ್ತು ಇದು ಇಡೀ ಸಿನೆಮಾ ಉತ್ತಮವಾಗುವಲ್ಲಿ ಸಹಕರಿಸುತ್ತದೆ" ಎನ್ನುತ್ತಾರೆ. 
ವಿಭಿನ್ನ ರೀತಿಯ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿ ತೋರುವ ಚಿರು "2010 ರಲ್ಲಿ ಮಾಡಿದ 'ಲವ್ ಸ್ಟೋರಿ' ಯಿಂದ 'ವರದನಾಯಕ' ಕಮರ್ಷಿಯಲ್ ಸಿನೆಮಾದವರೆಗೂ ನಾನು ಹಲವು ಸಿನೆಮಾಗಳನ್ನು ಪ್ರಯೋಗಿಸಿದ್ದೇನೆ. ಆದುದರಿಂದ ನನಗೆ ಹೊಸ ಬಗೆಯ ಪಾತ್ರವನ್ನು ತೋರಿಸುವ ನಿರ್ದೇಶಕ ಸಿಕ್ಕರೆ ನಾನು ಎರಡನೇ ಬಾರಿಗೆ ಯೋಚಿಸುವುದಿಲ್ಲ" ಎಂದು ಚಿರು ಹೇಳಿತ್ತಾರೆ. 
ಹಾಗೆಯೇ ಚೊಚ್ಚಲ ನಿರ್ದೇಶಕ ವಿನಯ್ ಕೃಷ್ಣ ನಿರ್ದೇಶನದ 'ಸೀಶರ್' ನಲ್ಲೂ ಚಿರು ನಟಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com