ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ 'ಜಾಗ್ವಾರ್' ಸಿನೆಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪಾತ್ರ ನೀಡಿದ್ದು, ಕನ್ನಡ ಮತ್ತು ತೆಲುಗು ಭಾಷೆಯ ಎರಡೂ ಅವತಾರಿಣಿಕೆಗಳು ಮೊದಲೇ ನಿಗದಿಯಾದಂತೆ
ಬೆಂಗಳೂರು: ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ 'ಜಾಗ್ವಾರ್' ಸಿನೆಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪಾತ್ರ ನೀಡಿದ್ದು, ಕನ್ನಡ ಮತ್ತು ತೆಲುಗು ಭಾಷೆಯ ಎರಡೂ ಅವತಾರಿಣಿಕೆಗಳು ಮೊದಲೇ ನಿಗದಿಯಾದಂತೆ ಅಕ್ಟೋಬರ್ 6 ಕ್ಕೆ ಬಿಡುಗಡೆ ಮಾಡಲು ನಿರ್ಮಾಪಕ-ರಾಜಕಾರಣಿ ಎಚ್ ಡಿ ಕುಮಾರಸ್ವಾಮಿ ಸಿದ್ಧರಾಗಿದ್ದಾರೆ.
"ಹಾಲಿವುಡ್ ಮಾನದಂಡದಲ್ಲಿ ತಮ್ಮ ಪುತ್ರ ನಿಖಿಲ್ ನಟಿಸಿರುವ ಈ ಸಿನೆಮಾ ಚಿತ್ರೀಕರಣಗೊಂಡಿರುವುದಕ್ಕೆ ನಿರ್ಮಾಪಕ ಬಹಳ ಸಂತಸದಿಂದಿದ್ದು, ಸಿನೆಮಾ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅವರೇ ವೈಯಕ್ತಿಕವಾಗಿ ಸಿನೆಮಾ ಬಿಡುಗಡೆಯ ಹೊಣೆ ಹೊತ್ತಿದ್ದಾರೆ. ವಿಶ್ವದಾದ್ಯಂತ 1000 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಈ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆ ಇದೆ" ಎಂದು ನಿರ್ಮಾಣ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. ಕುಮಾರಸ್ವಾಮಿಯವರು ಈ ಸಿನೆಮಾದ ಚಿತ್ರೀಕರಣದ ಮೊದಲ ಹಂತದಿಂದಲೂ ಎಲ್ಲ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ವಿಶೇಷ.
ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ 'ಜಾಗ್ವಾರ್' ಬಿಡುಗಡೆಗೆ ಸನಿಹವಾಗುತ್ತಿರುವ ಸಮಯದಲ್ಲಿ ಪ್ರಚಾರವನ್ನು ಹೆಚ್ಚಿಸಲು ನಿರ್ಮಾಣತಂಡ ಅಣಿಯಾಗಿದೆ. ಚಲನಚಿತ್ರ ಪ್ರಚಾರಕ್ಕಾಗಿ ಅಕ್ಟೋಬರ್ 2 ಮತ್ತು 3 ರಂದು ತಮನ್ನಾ ಬೆಂಗಳೂರಿಗೆ ಬರಲಿದ್ದಾರೆ ಎಂದು ತಿಳಿದುಬಂದೆ.
ಈ ಸಿನೆಮಾದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿರುವ ನಟಿ ತಮನ್ನಾ ಸಿನೆಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಹಾಗೆಯೇ ಸಿನೆಮಾ ಪ್ರಚಾರಕ್ಕೂ ಉತ್ಸಾಹ ತೋರಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ನಿಖಿಲ್ ಅಭಿನಯವನ್ನು ಮೆಚ್ಚಿರುವ ತಮನ್ನಾ ಅವರೆದುರು ಮುಂದಿನ ಸಿನೆಮಾಗಳಲ್ಲಿ ನಟಿಸುವ ಆಸಕ್ತಿ ತೋರಿದ್ದಾರಂತೆ.
ಬಾಹುಬಲಿ ನಿರ್ದೇಶಕ್ ಎಸ್ ಎಸ್ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಈ ಸಿನೆಮಾಗೆ ಚಿತ್ರಕಥೆ ಬರೆದಿದ್ದು, ಎ ಮಹಾದೇವ ನಿರ್ದೇಶಕ. ದೀಪ್ತಿ ಸಾಟಿ ನಾಯಕನಟಿಯಾಗಿದ್ದು, ಜಗಪತಿ ಬಾಬು, ಅವಿನಾಶ್, ರಮ್ಯಾ ಕೃಷ್ಣ ಮತ್ತು ಸಾಧುಕೋಕಿಲಾ ತಾರಾಗಣದ ಭಾಗವಾಗಿದ್ದಾರೆ.