'ವೆನಿಲ್ಲಾ' ಚಿತ್ರದಲ್ಲಿ ಅವಿನಾಶ್ ಮತ್ತು ಸ್ವಾತಿ ಕೊಂಡೆ
ಸಿನಿಮಾ ಸುದ್ದಿ
'ವೆನಿಲ್ಲಾ' ಸವಿಯಲು ಸಿದ್ಧರಾಗಿ!
'ಬ್ಯುಟಿಫುಲ್ ಮನಸ್ಸುಗಳು' ಸಿನೆಮಾದ ಯಶಸ್ಸಿನ ನಂತರ ನಿರ್ದೇಶಕ ಜಯತೀರ್ಥ ಮತ್ತೊಂದು ಸಿನೆಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಭರದಿಂದ ಸಾಗಿದೆ.
ಬೆಂಗಳೂರು: 'ಬ್ಯುಟಿಫುಲ್ ಮನಸ್ಸುಗಳು' ಸಿನೆಮಾದ ಯಶಸ್ಸಿನ ನಂತರ ನಿರ್ದೇಶಕ ಜಯತೀರ್ಥ ಮತ್ತೊಂದು ಸಿನೆಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಭರದಿಂದ ಸಾಗಿದೆ.
'ವೆನಿಲ್ಲಾ' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಹೊಸಬರಾದ ಅವಿನಾಶ್ ಮತ್ತು ಸ್ವಾತಿ ಕೊಂಡೆ ಒಳಗೊಂಡ ಚಿತ್ರದ ಸ್ಟಿಲ್ ಗಳು ಈಗ ಲಭ್ಯವಾಗಿವೆ.
"'ವೆನಿಲ್ಲಾ' ನಿಗೂಢ ಕೊಲೆಯ ಥ್ರಿಲ್ಲರ್ ಚಿತ್ರ. ಇದನ್ನು ಹಸಿರು ಮತ್ತು ಸಮುದ್ರದ ಹಿನ್ನಲೆಯಲ್ಲಿ ಚಿತ್ರೀಕರಿಸಲೇಬೇಕಿತ್ತು ಆದುದರಿಂದ ಮುಲ್ಕಿ, ಕಾಪು, ಮೂಡಬಿದ್ರೆ, ಉಡುಪಿ ಮತ್ತು ಮಣಿಪಾಲ್ ನಗರಗಳನ್ನು ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡೆವು. ತಂಡದ ಮುಂದಿನ ನಿಲ್ದಾಣ ಮೈಸೂರು ಆಗಿದ್ದು ನಂತರ ದೀರ್ಘಾವಧಿ ಹಂತದ ಚಿತ್ರೀಕರಣಕ್ಕೆ ಬಾಲಿಗೆ ತೆರಳಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.
"ಕೇವಲ ಹಾಡುಗಳಿಗಾಗಿ ಮಾತ್ರ ಬಾಲಿಗೆ ತೆರಳುತ್ತಿಲ್ಲ" ಎಂದು ಸ್ಪಷ್ಟಪಡಿಸುತ್ತಾರೆ ನಿರ್ದೇಶಕ. ರವಿಶಂಕರ್ ಗೌಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಖಿಲ ಕಂಬೈನ್ಸ್ ಅಡಿ ಈ ಸಿನೆಮಾ ನಿರ್ಮಾಣವಾಗುತ್ತಿದ್ದು, ಬಿಜೆ ಭರತ್ ಸಂಗೀತ ಮತ್ತು ಕಿರಣ್ ಹಂಪಾಪುರ ಅವರ ಸಿನೆಮ್ಯಾಟೋಗ್ರಫಿ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ