ಗುರುನಂದನ್
ಸಿನಿಮಾ ಸುದ್ದಿ
ಗುರುದತ್ ನಟನೆಯ 'ರಾಜು ಕನ್ನಡ ಮೀಡಿಯಂ'ಗೆ ರಷ್ಯಾ ರೂಪದರ್ಶಿ ಎಂಟ್ರಿ!
ಹಲವು ಸುತ್ತುಗಳ ಆಡಿಷನ್ ನಂತರ ಗುರುನಂದನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ರಾಜು ಕನ್ನಡ ಮೀಡಿಯಂ' ಸಿನೆಮಾಗೆ ರಷ್ಯಾ ಮೂಲದ ಮಾಡೆಲ್ ಏಂಜೆಲಿನಾ ದೆಸೆದಿನ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಹಲವು ಸುತ್ತುಗಳ ಆಡಿಷನ್ ನಂತರ ಗುರುನಂದನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ರಾಜು ಕನ್ನಡ ಮೀಡಿಯಂ' ಸಿನೆಮಾಗೆ ರಷ್ಯಾ ಮೂಲದ ಮಾಡೆಲ್ ಏಂಜೆಲಿನಾ ದೆಸೆದಿನ ಆಯ್ಕೆಯಾಗಿದ್ದಾರೆ. ಈ ಸಿನೆಮಾದಲ್ಲಿ ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ಈಗಾಗಲೇ ನಟಿಸುತ್ತಿದ್ದು, ಏಂಜೆಲಿನಾ ಮೂರನೇ ಹೀರೋಯಿನ್.
ವಿದೇಶದಿಂದ ಚಿತ್ರೀಕರಣ ಮುಗಿಸಿ ಹಿಂದಿರುಗಿರುವ ತಂಡ ಮಾತಿನ ಭಾಗವನ್ನು ಮುಗಿಸಿದ್ದು, ಈಗ ಮಾಡೆಲ್-ನಟಿ ಜೊತೆಗಿನ ಹಾಡಿನ ಚಿತ್ರೀಕರಣವಷ್ಟೇ ಬಾಕಿಯುಳಿದಿದೆ ಎಂದು ತಿಳಿಸಿದೆ. ಬಿಡುಗಡೆ ಸನಿಹವಾದಂತೆ ಗುರುನಂದನ್ ಮತ್ತು ಏಂಜೆಲಿನಾ ಅವರುಗಳನ್ನು ಒಳಗೊಂಡ ಫೋಟೋಗಳನ್ನು ಹಂಚಿಕೊಳ್ಳುವುದಾಗಿ ನಿರ್ಮಾಪಕ ಕೆ ಎ ಸುರೇಶ ಹೇಳಿದ್ದಾರೆ.
ಕಥೆಯ ಪ್ರತಿ ಹಂತಕ್ಕೂ ಸೂಕ್ತವಾಗುವ ಹೀರೋಯಿನ್ ಗಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸುವ ನಿರ್ಮಾಪಕ "ಮಲೆನಾಡಿನಲ್ಲಿ ಶಾಲಾ ಬಾಲಕಿಯಾಗಿ ಆಶಿಕಾ ನಟಿಸಿದ್ದರೆ, ಬೆಂಗಳೂರಿನಲ್ಲಿ ಅವಂತಿಕಾ ಮತ್ತು ಇಂಗ್ಲಿಷ್ ಮಾತನಾಡುವ ವಿದೇಶಿ ಯುವತಿಯಾಗಿ ಏಂಜಲೀನಾ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ ಸುರೇಶ.
ಈಮಧ್ಯೆ 'ರಾಜು ಕನ್ನಡ ಮೀಡಿಯಂ' ಟೀಸರ್ ಐದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಮೇನಲ್ಲಿ ಬಿಡುಗಡ್ ಮಾಡುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ