'ರೂಪಾ'ಗಾಗಿ ಮದ್ಯಪಾನ, ಧೂಮಪಾನ ಕಲಿಯಬೇಕಾಯಿತು: ಮಮತಾ ರಾಹುತ್

ಹಾಸ್ಯನಟಿಯಾಗಿ ಸಿನೆಯಾ ವೃತ್ತಿಜೀವನ ಪ್ರಾರಂಭಿಸಿದ ಮಮತಾ ರಾಹುತ್ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟರೊಂದಿಗೆ ಕೆಲಸ ಮಾಡಿದ್ದಾರೆ.
ನಟಿ ಮಮತಾ ರಾಹುತ್
ನಟಿ ಮಮತಾ ರಾಹುತ್
ಬೆಂಗಳೂರು: ಹಾಸ್ಯನಟಿಯಾಗಿ ಸಿನೆಯಾ ವೃತ್ತಿಜೀವನ ಪ್ರಾರಂಭಿಸಿದ ಮಮತಾ ರಾಹುತ್ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟರೊಂದಿಗೆ ಕೆಲಸ ಮಾಡಿದ್ದಾರೆ. 
ನಂತರ ಅವರು 'ಭದ್ರ', 'ಆಟೋ ರಾಜ' ಸಿನೆಮಾಗಳಲ್ಲಿ ಹೀರೋಯಿನ್ ಪಾತ್ರಗಳಲ್ಲಿ ನಟಿಸಿದವರು. ನಂತರ ತೆಲುಗು ಸಿನೆಮಾರಂಗಕ್ಕೆ ತೆರಳಿ ಅಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. 
'ಗೂಳಿಹಟ್ಟಿ'ಯ ಮೂಲಕ ಮೂರು ವರ್ಷದ ನಂತರ ನಟಿಯನ್ನು ಕನ್ನಡಕ್ಕೆ ವಾಪಸ್ ಕರೆಯಲಾಗಿತ್ತು. ಈಗ ಅವರ ಮುಂದಿನ ಸಿನೆಮಾ 'ರೂಪ'ದಲ್ಲಿ ನಾಯಕನಟಿಯಾಗಿ ನಟಿಸಿದ್ದು ಈ ವಾರ ತೆರೆಕಾಣುತ್ತಿದೆ. 
ತಮ್ಮ ವೈಯಕ್ತಿಕ ಜೀವನದಿಂದ ಬಹಳ ವಿಭಿನ್ನವಾಗಿರುವ ಈ ಪಾತ್ರವನ್ನು ಆಯ್ಕೆ ಮಾಡಿಕೊಂಡು ಮಮತಾ ದಿಟ್ಟತನ ಮೆರೆದಿದ್ದಾರೆ. "ವೈಯಕ್ತಿಕವಾಗಿ ನಾನು ಮದ್ಯಪಾನ, ಧೂಮಪಾನ ಅಥವಾ ಹುಡುಗರೊಂದಿಗೆ ಓಡಾಡುವುದನ್ನು ಇಷ್ಟಪಡುವುದಿಲ್ಲ. ಆದರೆ ಸಿನಿಮಾಗಾಗಿ ಇವುಗಳನ್ನು ಕಲಿಯಬೇಕಾಗಿ ಬಂತು. ಮೊದಲಿಗೆ ಇವುಗಳನ್ನು ಕಲಿಯುವುದು ಕಷ್ಟವಾಯಿತು ಆದರೆ ಕೊನೆಗೆ ಪಾತ್ರಕ್ಕಾಗಿ ಅವುಗಳನ್ನು ಮಾಡಬೇಕಾಯಿತು. ಅದಕ್ಕೂ ಮಿಗಿಲಾಗಿ ಮರಸುತ್ತುವ ಪಾತ್ರಗಳಿಗಿಂತಲೂ ಹೆಚ್ಚಿನದನ್ನು ಮಾಡಬಲ್ಲೆ ಎಂದು ಚಿತ್ರರಂಗಕ್ಕೆ ತೋರಿಸಬೇಕಿತ್ತು" ಎನ್ನುತ್ತಾರೆ ಮಮತಾ. 
ಆಂಟನಿ ಕಮಲ್ ನಿರ್ದೇಶನದ ಈ ನಿಗೂಢ ಥ್ರಿಲ್ಲರ್ ಸಿನೆಮಾವನ್ನು ೧೪ ದಿನಗಳಲ್ಲಿ, ಒಂದೇ ಸ್ಟಾರ್ ಹೋಟೆಲ್ ನಲ್ಲಿ ಚಿತ್ರೀಕರಿಸಲಾಗಿದೆ. "ಈ ಎಲ್ಲ ಶ್ರೇಯದ್ದು ನಿರ್ಮಾಪಕ ನೆಲ್ಸನ್ ರೋಜರ್ ಅವರಿಗೆ ಸಲ್ಲಬೇಕು. ಅವರು ಸೃಜನಶೀಲವಾಗಿ ಅತ್ಯತ್ತಮ" ಎನ್ನುತ್ತಾರೆ ಮಮತಾ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com