ಕೆ ಎಂ ಚೈತನ್ಯ-ಚಿರು ಸರ್ಜಾ ಜೋಡಿಯಿಂದ ಆರ್ ಕೆ ನಾರಾಯಣ್ ಮಾಲ್ಗುಡಿ ಬೆಳ್ಳಿತೆರೆಗೆ?

ನಟ ಚಿರಂಜೀವಿ ಸರ್ಜಾ ಅವರ ಇತ್ತೀಚಿನ ಟ್ವೀಟ್ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದೆ. 'ಮಾಲ್ಗುಡಿಯಲ್ಲಿ ನನ್ನ ಬ್ಯುಸಿಯಾಗಿಟ್ಟಿರುವುದೇನು...' ಎಂದು ಬರೆದು 'ಎ ಟೌನ್ ಕಾಲ್ಡ್ ಮಾಲ್ಗುಡಿ'
ನಟ ಚಿರಂಜೀವಿ ಸರ್ಜಾ
ನಟ ಚಿರಂಜೀವಿ ಸರ್ಜಾ
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಇತ್ತೀಚಿನ ಟ್ವೀಟ್ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದೆ. 'ಮಾಲ್ಗುಡಿಯಲ್ಲಿ ನನ್ನ ಬ್ಯುಸಿಯಾಗಿಟ್ಟಿರುವುದೇನು...' ಎಂದು ಬರೆದು 'ಎ ಟೌನ್ ಕಾಲ್ಡ್ ಮಾಲ್ಗುಡಿ' ಪುಸ್ತಕವನ್ನು ಓದುತ್ತಿರುವ ಫೋಟೋವನ್ನು ಚಿರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಮುಂದಿನ ಯೋಜನೆಗೆ ಸಂಬಂಧಿಸಿದ್ದೇ ಎಂಬ ಸಂದೇಹ ಏಳುವುದಕ್ಕೂ, ನಿರ್ದೇಶಕ ಕೆ ಎಂ ಚೈತನ್ಯ ಆರ್ ಕೆ ನಾರಾಯಣ್ ಅವರ ಕಾದಂಬರಿ 'ಮ್ಯಾನ್ ಈಟರ್ ಆಫ್ ಮಾಲ್ಗುಡಿ'ಯನ್ನು ಸಿನೆಮಾಗೆ ಅಳವಡಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗೂ ಸಂಬಂಧ ಬೆಸೆಯುವಂತೆ ಮಾಡಿದೆ. 
ಈ ಗುಟ್ಟನ್ನು ನಿರ್ದೇಶಕ ಜತನದಿಂದ ಕಾಯ್ದುಕೊಂಡಿದ್ದಾರಾದರು, ಇದನ್ನು ಸಿನೆಮಾವಾಗಿ ಹೊರತರಲು ಚೈತನ್ಯ ನಿರ್ಮಾಪಕರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 
ಚೈತನ್ಯ ಅವರ 'ಆಟಗಾರ' ಸಿನೆಮಾದ ಮೇಲೆ ಕೆಲಸ ಮಾಡಿದ ನಂತರ ನಟ ಚಿರು ಅವರಿಗೆ ಸಿನೆಮಾದ ಬಗ್ಗೆ ಪರಿಕಲ್ಪನೆಗಳೇ ಬದಲಾಗಿವೆ ಎಂಬ ಗುಲ್ಲು ಕೂಡ ದಟ್ಟವಾಗಿವೆ. ಚೈತನ್ಯ ಅವರ 'ಆಕೆ' ಸಿನೆಮಾದಲ್ಲಿಯೂ ಕೆಲಸ ಮಾಡಿರುವ ಅವರು ಅತ್ಯುತ್ತಮವಾದ ಸ್ಕ್ರಿಪ್ಟ್ ಗೆ ಈಗ ಕಾಯುತ್ತಾರಂತೆ. ಈಗ ಚಿರು ಪುಸ್ತಕ ಓದುವುದರಲ್ಲಿ ನಿರತರಾಗಿದ್ದರೆ, ಚೈತನ್ಯ ಇದೆ ಸಮಯದಲ್ಲಿ ಸಿನೆಮಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. 
'ಆ ಟೌನ್ ಕಾಲ್ಡ್ ಮಾಲ್ಗುಡಿ' ಪುಸ್ತಕದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ ಎಂದು ಚಿರಂಜೀವಿಯವರನ್ನು ಪ್ರಶ್ನಿಸಿದರೆ "ನಾನು ಪುಸ್ತಕದ ಓದಿನಿಂದ ಸಂತಸವಾಗಿದ್ದೇನೆ ಅದರ ಬಗ್ಗೆ ಈಗ ಹೆಚ್ಚು ಮಾತನಾಡುವುದು ಬೇಡ. ನಾನು ಎಂದಿಗೂ ಶಂಕರ್ ನಾಗ್ ಅವರ ಕೆಲಸಗಳನ್ನು ಇಷ್ಟಪಟ್ಟಿದ್ದೇನೆ. ಮಾಲ್ಗುಡಿ ಕಲ್ಟ್ ಆಗಿ ಬೆಳೆದಿದೆ ಮತ್ತು ಯಾರಾದರೂ ಸಿನೆಮಾ ಮಾಡಿದರೆ ನಟನಾಗಿ ಅದರಲ್ಲಿ ಭಾಗಿಯಾಗಲು ಸದಾ ಸಿದ್ಧ" ಎನ್ನುವ ಚಿರು ಹೆಚ್ಚಿನದೇನನ್ನು ತಿಳಿಸುವುದಕ್ಕೆ ನಿರಾಕರಿಸುತ್ತಾರೆ. ಈ ಪುಸ್ತಕ ಓದುತ್ತಿರುವುದಕ್ಕೂ 'ಥಗ್ಸ್ ಆಫ್ ಮಾಲ್ಗುಡಿ'ಗು ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸುತ್ತಾರೆ. 
ನಿಧಾನಕ್ಕೆ ನಟನೆಯಲ್ಲಿ ಸಿಕ್ಕುವ ಸುಖವನ್ನು ಕಂಡುಕೊಂಡಿದ್ದೇನೆ ಎನ್ನುವ ನಟ ಹಲವು ಒಳ್ಳೆಯ ಸಿನೆಮಾಗಳಲ್ಲಿ ನಟಿಸುತ್ತಿರವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. "ಆಟಗಾರನ ನಂತರ ಸಿನೆಮಾ ಬಗ್ಗೆ ನನ್ನ ಗ್ರಹಿಕೆ ಬದಲಾಗಿದೆ. ನಾನಷ್ಟೇ ಅಲ್ಲ ಹಲವು ನಿರ್ದೇಶಕರು ಮತ್ತು ಪ್ರೇಕ್ಷಕರು ಕೂಡ ಬದಲಾಗಿದ್ದಾರೆ. ಅದೇ ವರ್ಷ ಇನ್ನಷ್ಟು ಹೊಸ ಬಗೆಯ ಸಿನೆಮಾಗಳನ್ನು ಕಂಡೆವು. 'ರಂಗಿತಂರಂಗ'ದಿಂದ ಪ್ರಾರಂಭವಾಗಿ 'ಆಟಗಾರ', 'ಕೆಂಡಸಂಪಿಗೆ' ಹೀಗೆ ಅತ್ಯುತ್ತಮ ಸಿನೆಮಾಗಳು ಮುಂದುವರೆದವು. ಚೈತನ್ಯ ಜೊತೆಗಿನ ನನ್ನ ಮುಂದಿನ ಸಿನೆಮಾ 'ಆಕೆ' ಕೂಡ ಅಂತಹ ಉದಾಹರಣೆಯಾಗಲಿದೆ" ಎನ್ನುತ್ತಾರೆ ಚಿರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com