'ಹಾಫ್ ಗರ್ಲ್ ಫ್ರೆಂಡ್' ಮಾತೃಭಾಷೆ ಮಹತ್ವದ ಬಗ್ಗೆ ಚರ್ಚೆಎತ್ತುವ ಸಾಧ್ಯತೆಯಿದೆ: ಅರ್ಜುನ್ ಕಪೂರ್

ಜನಪ್ರಿಯ ಲೇಖಕ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ತಮ್ಮ ಮುಂದಿನ ಸಿನೆಮಾ 'ಹಾಫ್ ಗರ್ಲ್ ಫ್ರೆಂಡ್', ಮಾತೃಭಾಷೆಯನ್ನು ತಿಳಿದಿರಬೇಕಾದ ಪ್ರಮುಖ ಚರ್ಚೆಯನ್ನು ಎತ್ತುವ ಸಾಧ್ಯತೆ ಇದೆ
ಬಾಲಿವುಡ್ ನಟ ಅರ್ಜುನ್ ಕಪೂರ್
ಬಾಲಿವುಡ್ ನಟ ಅರ್ಜುನ್ ಕಪೂರ್
ಮುಂಬೈ: ಜನಪ್ರಿಯ ಲೇಖಕ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ತಮ್ಮ ಮುಂದಿನ ಸಿನೆಮಾ 'ಹಾಫ್ ಗರ್ಲ್ ಫ್ರೆಂಡ್', ಮಾತೃಭಾಷೆಯನ್ನು ತಿಳಿದಿರಬೇಕಾದ ಪ್ರಮುಖ ಚರ್ಚೆಯನ್ನು ಎತ್ತುವ ಸಾಧ್ಯತೆ ಇದೆ ಎಂದಿದ್ದಾರೆ ಬಾಲಿವುಡ್ ನಟ ಅರ್ಜುನ್ ಕಪೂರ್.
ನಿರ್ದೇಶಕ ಮೋಹಿತ್ ಸೂರಿ, ಬರಹಗಾರ ಚೇತನ್ ಭಗತ್, ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ ಅರ್ಜುನ್ "ಇಂಗ್ಲಿಷ್ ಮಾತನಾಡುವ ಬಗ್ಗೆ ಮುಖ್ಯ ಪಾತ್ರಕ್ಕೆ ತೊಂದರೆ ಇರುವುದರಿಂದ, ಈ ಸಿನೆಮಾ ನೋಡಿದ ಮೇಲೆ, ಜನರು ಇಂಗ್ಲಿಷ್ ಬದಲಿಗೆ ತನ್ನ ಮಾತೃಭಾಷೆಯನ್ನು ತಿಳಿಯುವ ಬಗ್ಗೆ ಜನ ಮಾತನಾಡಲಿದ್ದಾರೆ ಎಂದು ನಂಬಿದ್ದೇನೆ" ಎಂದಿದ್ದಾರೆ. 
"ನಮ್ಮ ದೇಶದಲ್ಲಿ, ನೀವೆಷ್ಟೇ ಬುದ್ಧಿವಂತರಾಗಿದ್ದರು, ನಿಮ್ಮ ಇಂಗ್ಲಿಷ್ ಸುಲಲಿತವಾಗಿಲ್ಲದೆ ಹೋದರೆ, ನಿಮ್ಮನ್ನು ಜನ ಕೀಳು ದೃಷ್ಟಿಯಲ್ಲಿ ನೋಡುತ್ತಾರೆ. ಇದು ನಾಚಿಕೆಗೇಡು" ಎಂದಿರುವ ಅವರು "ಇಂಗ್ಲಿಷ್ ಗೊತ್ತಿರುವುದು ಒಳ್ಳೆಯದು ಆದರೆ ಮಾತೃಭಾಷೆಯಲ್ಲಿ ಮಾತನಾಡಲು ನಾಚಿಕೆ ಪಡುವುದೇಕೆ? ಅದರ ಆಧಾರದ ಮೇಲೆ ಜನ ಅಳೆಯುವುದೇಕೆ?" ಎಂದಿದ್ದಾರೆ. 
ಏಕ್ತಾ ಕಪೂರ್ ನಿರ್ಮಿಸಿರುವ ಮೋಹಿತ್ ಸೂರಿ ನಿರ್ದೇಶನದ 'ಹಾಫ್ ಗರ್ಲ್ ಫ್ರೆಂಡ್' ಮೇ ೧೯ ಕ್ಕೆ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com