'ಚಕ್ರವರ್ತಿ'ಯಿಂದಲೇ ನನ್ನ ನಿರ್ದೇಶನ ಪ್ರಾರಂಭವಾಗಬೇಕೆಂದಿತ್ತು ನನ್ನ ವಿಧಿ: ಚಿಂತನ್

ಎ ವಿ ಚಿಂತನ್ ನಿರ್ದೇಶನದ ಚೊಚ್ಚಲ ಚಿತ್ರ 'ಚಕ್ರವರ್ತಿ' ಈ ವಾರ ಬಿಡುಗಡೆ ಕಾಣುತ್ತಿದೆ. ಇದು ನಿರ್ದೇಶಕನಾಗಿ ಚಿಂತನ್ ಅವರಿಗೆ ಮೊದಲ ಚಿತ್ರವಾದರೂ, ಕಥೆಗಾರನಾಗಿ,
ಚಕ್ರವರ್ತಿ ಸಿನೆಮಾದಲ್ಲಿ ದೀಪ ಸನ್ನಿಧಿ ಮತ್ತು ದರ್ಶನ್
ಚಕ್ರವರ್ತಿ ಸಿನೆಮಾದಲ್ಲಿ ದೀಪ ಸನ್ನಿಧಿ ಮತ್ತು ದರ್ಶನ್
ಬೆಂಗಳೂರು: ಎ ವಿ ಚಿಂತನ್ ನಿರ್ದೇಶನದ ಚೊಚ್ಚಲ ಚಿತ್ರ 'ಚಕ್ರವರ್ತಿ' ಈ ವಾರ ಬಿಡುಗಡೆ ಕಾಣುತ್ತಿದೆ. ಇದು ನಿರ್ದೇಶಕನಾಗಿ ಚಿಂತನ್ ಅವರಿಗೆ ಮೊದಲ ಚಿತ್ರವಾದರೂ, ಕಥೆಗಾರನಾಗಿ, ಸಂಭಾಷಣಕಾರನಾಗಿ ಹಲವು ಸಿನೆಮಾಗಳ ಅನುಭವ ಅವರ ಹಿಂದಿದೆ. ತಮ್ಮ ಆಸಕ್ತಿದಾಯಕ ವೃತ್ತಿ ಜೀವನದಲ್ಲಿ ಅವರು ಅನಿಮೇಷನ್ ಉದ್ದಿಮೆ, ಬೋಧನೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 
ಕಳೆದ ೧೫ ವರ್ಷಗಳಿಂದ ಅವರು ನಿರ್ದೇಶನಕ್ಕೆ ಹಾತೊರೆಯುತ್ತಿದ್ದರು, ವಿಧಿಯ ಆಟವೇ ಬೇರೆ ಇತ್ತು, "ಚಕ್ರವರ್ತಿಯಿಂದಲೇ ನಾನು ಪ್ರಾರಂಭಿಸಬೇಕು ಎಂದು ಬರೆದಿತ್ತು" ಎನ್ನುತ್ತಾರೆ ಚಿಂತನ್. 
"ನಾನು ದಿನಕರ್, ದರ್ಶನ್ ಮತ್ತು ಮಲ್ಲಿಕಾರ್ಜುನ್ ಅವರನ್ನು ೧೬ ವರ್ಷಗಳಿಂದ ಬಲ್ಲೆ. ನನ್ನ ಕುಟುಂಬದ ಬೆಂಬಲ ಸದಾ ಇತ್ತು. ಈಗ ಸಮಯ ಕಳೆದಂತೆ ನಮ್ಮ ನಡುವಿಂದ ಸಂಬಂಧ ಉತ್ತಮಗೊಂಡಿದ್ದು ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತು" ಎನ್ನುತ್ತಾರೆ ಚಿಂತನ್. 
ರಾಮ್ ಗೋಪಾಲ್ ವರ್ಮಾ ಅವರ ಸಿನೆಮಾದ ಅಭಿಮಾನಿಯಾಗಿದ್ದೆ ಎನ್ನುವ ಅವರು ಉಪೇಂದ್ರ ಅವರ ನಿರ್ದೇಶನ ತಮ್ಮನ್ನು ಪ್ರಭಾವಿಸಿದ್ದಾಗಿ ತಿಳಿಸುತ್ತಾರೆ ಚಿಂತನ್. 
ದರ್ಶನ್ ಅವರು ಸಿನೆಮಾ ತಂಡ ಸೇರ್ಪಡೆಯಾದ ಮೇಲೆ ತಮ್ಮ ಆತ್ವವಿಶ್ವಾಸ ಹಿಗ್ಗಿದ್ದಾಗಿ ಹೇಳುವ ಚಿಂತನ್ "ಚೊಚ್ಚಲ ಬಾರಿಯ ನಿರ್ದೇಶಕನಿಗೆ ಈ ಯೋಜನೆ ಸರಾಗವಾಗಿ ನಡೆದುಹೋಯಿತು" ಎನ್ನುವ ಚಿಂತನ್ ಜನಪ್ರಿಯತೆಯಲ್ಲಿ ದರ್ಶನ್ ಅವರನ್ನು ರಜನಿಕಾಂತ್ ಅವರಿಗೆ ಹೋಲಿಸುತ್ತಾರೆ. "ನಾನು ರಜನಿಕಾಂತ್ ಸಿನೆಮಾಗಳನ್ನು ನೋಡುತ್ತಾ ಬಂದಿದ್ದೇನೆ. ಅವರು ಮಾಸ್ ಹೀರೊ ಬಿರುದನ್ನೂ ಇನ್ನು ಉಳಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ದರ್ಶನ್ ಅವರ ಜನಪ್ರಿಯತೆ ಇಲ್ಲಿ ಬೆಳೆಯುತ್ತಿದೆ. ಆದುದರಿಂದ ಜೀವನವನ್ನು ಮೀರಿದ ಪಾತ್ರಕ್ಕೆ ನಾನು ಕಥೆ ಸಂಭಾಷಣೆಯನ್ನು ಬರೆದೆ" ಎನ್ನುತ್ತಾರೆ ಚಿಂತನ್. 
"ಸ್ಟಾರ್ ನಟನ ನಿರ್ದೇಶಕನಾಗುವುದಕ್ಕೂ ಮೊದಲು ನಾನು ಅವರ ಅಭಿಮಾನಿ. ಅವರ ನಟನೆಯ ಜೊತೆಗೆ ಅವರ ಸರಳತೆ ಮತ್ತು ಪ್ರಾಣಿಗಳ ಮೇಲಿನ ಅವರ ಪ್ರೀತಿಗೂ ನಾನು ಅಭಿಮಾನಿ. ನಾನು ನನ್ನ ಹೀರೋನನ್ನು ಪ್ರೀತಿಸುತ್ತೇನೆ ಆದುದರಿಂದ ತೆರೆಯ ಮೇಲೆ ಮೂಡುವುದು ಮೂರ್ತಿ ಪೂಜೆ" ಎನ್ನುತ್ತಾರೆ ಚಿಂತನ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com