ಮಹಿಳೆಯರು ದೌರ್ಜನ್ಯದ ವಿರುದ್ಧ ಗಟ್ಟಿ ದನಿಯೆತ್ತಬೇಕು: ವಿಕಾಸ್ ಬಾಲ್ ವಿವಾದದ ಬಗ್ಗೆ ಕಂಗನಾ

ತಮ್ಮ 'ಕ್ವೀನ್' ಸಿನೆಮಾದ ನಿರ್ದೇಶಕ ವಿಕಾಸ್ ಬಾಲ್ ವಿರುದ್ಧ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಹಿಳೆಯರು
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್
ಮುಂಬೈ: ತಮ್ಮ 'ಕ್ವೀನ್' ಸಿನೆಮಾದ ನಿರ್ದೇಶಕ ವಿಕಾಸ್ ಬಾಲ್ ವಿರುದ್ಧ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಹಿಳೆಯರು ತಮ್ಮ ವಿರುದ್ಧದ ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಮಾತನಾಡಬೇಕು ಎಂದಿದ್ದಾರೆ. 
ಒಂದು ತಿಂಗಳ ಹಿಂದೆ ವರದಿಯಾದ್ದಂತೆ, ವಿಕಾಸ್ ಬಾಲ್ ಸಹ ಒಡೆತನದ ಫ್ಯಾಂಟಮ್ ಫಿಲಂಸ್ ನ ಮಹಿಳಾ ಸಿಬ್ಬಂದಿಯೊಬ್ಬರು ತಮಗಾದ ದೌರ್ಜನ್ಯಕ್ಕೆ ವಿಕಾಸ್ ಅವರನ್ನು ದೂರಿದ್ದರು. ಇದು ದೊಡ್ಡ ಚರ್ಚೆಯನ್ನು ಹುಟ್ಟಿಹಾಕಿತ್ತು. 
ಮಹಿಳಾ ಸಂಬಂಧಿ ವಿಷಯಗಳ ಬಗ್ಗೆ ಎಂದಿಗೂ ಗಟ್ಟಿಯಾಗಿ ಮಾತನಾಡುವ ಕಂಗನಾರನ್ನು, ಮಂಗಳವಾರ ಕಾರ್ಯಕ್ರಮವೊಂದರಲ್ಲಿ ವಿಕಾಸ್ ವಿರುದ್ಧದ ವಿವಾದದ ಬಗ್ಗೆ ಪ್ರಶ್ನಿಸಿದಾಗ "ಇದು ಬಹಳ ಗಂಭೀರ ವಿಷಯ. ಇಂತಹ ಪರಿಸ್ಥಿತಿಯನ್ನು ಎದುರಿಸುವವರು ಗಟ್ಟಿಯಾಗಿ ಮಾತನಾಡಬೇಕು ಎಂದಷ್ಟೇ ಹೇಳಬಲ್ಲೆ. ಹೊರಬಂದು ಮಾತನಾಡಿದ ಆ ಮಹಿಳೆ ಧೈರ್ಯಶಾಲಿ" ಎಂದಿದ್ದಾರೆ. 
"ಮಹಿಳಿಯರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಅಂಥವರನ್ನು ಮಾತನಾಡಲು ಉತ್ತೇಜಿಸಬೇಕು. ಅವರ ಕುಟುಂಬಗಳು, ಸಹೋದ್ಯಗಿಗಳು ಮತ್ತು ಸುತ್ತಮುತ್ತಲಿನ ವಾತಾವರಣ ಅವರಿಗೆ ಮುಜುಗರ ಉಂಟುಮಾಡಬಾರದು. ಇನ್ನು ಹೆಚ್ಚಿನ ಮಹಿಳೆಯರು ಹೊರಬಂದು ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕು. ಆಗಷ್ಟೇ ಇದರ ಬಗ್ಗೆ ಹೆಚ್ಚು ಅರಿವು ಮೂಡುವುದು. ಇದು ನನ್ನ ಅನಿಸಿಕೆ" ಎಂದಿದ್ದಾರೆ. 
ವಿಕಾಸ್ ಈ ಎಲ್ಲ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. 
"ಈ ಕಥೆಗೆ ಮತ್ತೊಂದು ಬದಿ ಕೂಡ ಇರುತ್ತದೆ" ಎಂದು ಕೂಡ ಕಂಗನಾ ಹೇಳಿದ್ದು "ಇದನ್ನು ನಿರ್ಧರಿಸಲು ಅಧಿಕಾರಿಗಳು ಮತ್ತು ಜನರಿದ್ದಾರೆ. ಆದರೆ ಸರಿಯೋ ತಪ್ಪೋ ಜನ ಮಾತನಾಡಬೇಕು ಮತ್ತು ಇದರ ಬಗ್ಗೆ ಚರ್ಚಿಸಬೇಕು" ಎಂದು ಕೂಡ ಕಂಗನಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com