ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ
ಸಿನಿಮಾ ಸುದ್ದಿ
ಶಾರುಖ್ ಜೊತೆ ನಟಿಸಲು ನಿರಾಕರಿಸಿದ ದೀಪಿಕಾ ಪಡುಕೋಣೆ?
ಆನಂದ್ ರೈ ಅವರ ಮುಂದಿನ ಚಿತ್ರಕ್ಕೆ ಶಾರುಖ್ ಖಾನ್ ನಾಯಕರಾಗಿದ್ದಾರೆ. ಬಹಳ ಕುತೂಹೂಲ ಮೂಡಿಸಿರುವ ಈ ಚಿತ್ರಕ್ಕೆ ಕತ್ರೀನಾ ಕೈಫ್ ಇಲ್ಲವೇ ದೀಪಿಕಾ ...
ಮುಂಬಯಿ: ಆನಂದ್ ರೈ ಅವರ ಮುಂದಿನ ಚಿತ್ರಕ್ಕೆ ಶಾರುಖ್ ಖಾನ್ ನಾಯಕರಾಗಿದ್ದಾರೆ. ಬಹಳ ಕುತೂಹೂಲ ಮೂಡಿಸಿರುವ ಈ ಚಿತ್ರಕ್ಕೆ ಕತ್ರೀನಾ ಕೈಫ್ ಇಲ್ಲವೇ ದೀಪಿಕಾ ಪಡುಕೋಣೆ ನಾಯಕಿ ಪಾತ್ರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.
ಸದ್ಯ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಶಾರುಖ್ ಖಾನ್ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರಂತೆ. ಆನಂದ್ ರೈ ಚಿತ್ರದ ಕಾನ್ಸೆಪ್ಟ್ ದೀಪಿಕಾಗೆ ಇಷ್ಟವಾಗಿದೆಯಂತೆ, ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ದೀಪಿಕಾ ಹೇಳಿದ್ದಾಳಂತೆ.
ಶಾರುಖ್ ಗೆ ಯಾರು ನಾಯಕಿಯಾಗಲಿದ್ದಾರೆ ಎಂಬುದನ್ನು ನಿರ್ದೇಶಕ ಆನಂದ್ ರೈ ಬಹಿರಂಗ ಪಡಿಸಿಲ್ಲ, ಶಾರುಖ್ ನಾಯಕಿ ಯಾರು ಎಂಬುದರ ಬಗ್ಗೆ ಹಲವು ವದಂತಿಗಳು ಕೇಳಿ ಬರುತ್ತಿವೆ.
ಈ ಸಿನಿಮಾದಲ್ಲಿ ಶಾರುಖ್ ಕುಬ್ಜನ ಪಾತ್ರ ಮಾಡಲಿದ್ದಾರಂತೆ, ಈ ವರ್ಷದ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಸೆಟ್ಟೇರಲಿದ್ದು, ಮುಂದಿನ ವರ್ಷದ ಕ್ರಿಸ್ ಮಸ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ