ಬೆಂಗಳೂರು: 'ಡವ್' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ ಅನೂಪ್ ಸಾ ರಾ ಗೋವಿಂದು ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಈಗ ನಿರ್ದೇಶಕ ಗುರುಪ್ರಸಾದ್ ಅವರನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ನಟನಿಗೆ ದೊಡ್ಡ ಬ್ರೇಕ್ ನೀಡಲಿದೆ ಎನ್ನಲಾಗಿದೆ.
'ಮಠ', 'ಎದ್ದೇಳು ಮಂಜುನಾಥ' ಸಿನೆಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿ ಇತ್ತೀಚೆಗಷ್ಟೇ 'ಎರಡನೇ ಸಲ' ಸಿನೆಮಾ ಬಿಡುಗಡೆ ಮಾಡಿದ್ದ ಗುರುಪ್ರಸಾದ್ ಮುಂದಿನ ಸಿನೆಮಾಗೆ ಅನೂಪ್ ಅವರ ಜೊತೆಗೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನು ಅಧಿಕೃತ ಘೋಷಣೆ ಹೊರಹೊಮ್ಮಬೇಕಿದ್ದರು, ಬಲ್ಲ ಮೂಲಗಳಿಂದ ಈ ಸಿನೆಮಾದ ಶೀರ್ಷಿಕೆ 'ಅದೆಮಾ' ಎಂದು ಹೆಸರಿಸಲಾಗಿದೆ ಎನ್ನಲಾಗಿದೆ.
ಈಮಧ್ಯೆ ಅನೂಪ್ ತಮ್ಮ ಎರಡನೇ ಚಿತ್ರ 'ಸಾಗುವ ಹಾದಿಯಲ್ಲಿ' ಚಿತ್ರೀಕರಣ ಮುಗಿಸಿದ್ದು, ಅದರ ಆಡಿಯೋವನ್ನು ಇತ್ತೀಚೆಗಷ್ಟೇ ನಟ ಸುದೀಪ್ ಬಿಡುಗಡೆ ಮಾಡಿದ್ದರು.