ನನ್ನ ಸಂಗೀತ ಕನ್ನಡ ಚಿತ್ರರಂಗದ ದಂತಕಥೆಯನ್ನು ನೆನಪಿಸುತ್ತಿರುವುದು ನನ್ನ ಅದೃಷ್ಟ: ಹರಿಕೃಷ್ಣ

ವಿ ಹರಿಕೃಷ್ಣ ಸಂಗೀತ ನೀಡಿದ್ದ 'ರಾಜಕುಮಾರ' ಸಿನೆಮಾ ಬೊಂಬೆ ಹಾಡು ಬಹಳ ಜನಪ್ರಿಯವಾಗಿ ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದಲ್ಲದೆ ಚಲನಚಿತ್ರದ ಯಶಸ್ಸಿಗೂ ಸಹಕರಿಸಿದೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಬೆಂಗಳೂರು: ವಿ ಹರಿಕೃಷ್ಣ ಸಂಗೀತ ನೀಡಿದ್ದ 'ರಾಜಕುಮಾರ' ಸಿನೆಮಾ ಬೊಂಬೆ ಹಾಡು ಬಹಳ ಜನಪ್ರಿಯವಾಗಿ ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದಲ್ಲದೆ ಚಲನಚಿತ್ರದ ಯಶಸ್ಸಿಗೂ ಸಹಕರಿಸಿದೆ. ಈ ಹಾಡು ಡಾ. ರಾಜಕುಮಾರ್ ಅವರ ಕಸ್ತೂರಿ ನಿವಾಸದ ನೆನಪುಗಳನ್ನು ಮರುಕಳಿಸಿತ್ತು. ಅವರ ಮುಂದಿನ ಆಲ್ಬಮ್ ಕೂಡ ಮತ್ತೊಂದು ಖ್ಯಾತ ಸಿನೆಮಾವನ್ನು ನೆನಪಿಸಲಿದೆಯಂತೆ. 
ಯೋಗಿ ಜಿ ರಾಜ್ ನಿರ್ದೇಶನದ, ಶಿವರಾಜ್ ಕುಮಾರ್ ನಟಿಸುತ್ತಿರುವ 'ಬಂಗಾರ S/O ಬಂಗಾರದ ಮನುಷ್ಯ' ಸಿನೆಮಾಗೆ ಕೂಡ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ರಾಜಕುಮಾರ್ ಅವರ ಕ್ಲಾಸಿಕ್ ಸಿನೆಮಾ 'ಬಂಗಾರದ ಮನುಷ್ಯ'ನ ನೆನಪು ಹೊತ್ತು ತರುವ ಈ ಹೊಸ ಸಿನೆಮಾವನ್ನು ಕರ್ನಾಟಕ ಮತ್ತು ವಿಶ್ವದ ರೈತರಿಗೆ ಅರ್ಪಿಸಿದ್ದಾರೆ ನಿರ್ದೇಶಕ ಯೋಗಿ. 
ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ ೨೪ ರಂದು 'ಬಂಗಾರ s / o ಬಂಗಾರದ ಮನುಷ್ಯ' ಸಿನೆಮಾದ ಆಡಿಯೋ ಬಿಡುಗಡೆ ನೆರವೇರಲಿದೆ. "ನನಗೆ ಇಂತಹ ಸಿನೆಮಾಗಳಿಗೆ ಸಂಗೀತ ನೀಡಲು ಅವಕಾಶ ಸಿಕ್ಕಾಗ, ಮತ್ತು ಕನ್ನಡ ಚಿತ್ರರಂಗದ ದಂತಕಥೆಯನ್ನು ನೆನಪಿಸುವುದಕ್ಕೆ ಅದಕ್ಕೆ ಸಾಧ್ಯವಾದರೆ, ಆ ಮೇರು ನಟರಿಗೆ ನಾನು ಸಂಗೀತ ನೀಡುತ್ತಿದ್ದೇನೆ ಎನ್ನುವಷ್ಟು ಸಂತಸವಾಗುತ್ತದೆ. ಆ ಮಟ್ಟಿಗೆ ನಾನು ಅದೃಷ್ಟಶಾಲಿ" ಎನ್ನುತ್ತಾರೆ. 
"'ಒಂದು ಊರಲಿ ಒಬ್ಬ ರಾಜನಿದ್ದ' ಎಂಬ ಹಾಡು ಈ ಆಲ್ಬಮ್ ನ ಮುಖ್ಯಾಂಶ ಎನ್ನುವ ಅವರು, ಇದು ರೈತರ ಬಗೆಗಿನ ಸಿನೆಮಾ ಆದ್ದರಿಂದ ಹಲವರ ಹೃದಯವನ್ನು ಗೆಲುವ ಭರವಸೆಯಿದೆ. ಬೊಂಬೆ ಹಾಡಿನಂತೆಯೇ ಈ ಹಾಡು ಕೂಡ ಸಿನೆಮಾ ಜೊತೆಗೆ ಸಾಕಷ್ಟು ಬೆರೆತಿದೆ" ಎನ್ನುತ್ತಾರೆ ಸಂಗೀತ ನಿರ್ದೇಶಕ. 
ಜಯಣ್ಣ ಕಂಬೈನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿದ್ಯಾ ಪ್ರದೀಪ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನೆಮಾ ಮೇನಲ್ಲಿ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com