ಬೆಂಗಳೂರು: ನಿರ್ದೇಶಕ ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ ಜೋಡಿಯ ಸಿನೆಮಾ 'ಜಾನಿ ಮೇರಾ ನಾಮ್' ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಒಂದು ಮಟ್ಟಕ್ಕೆ ಯಶಸ್ವಿಯಾಗಿತ್ತು ಕೂಡ. ಇದರಲ್ಲಿ ರಮ್ಯಾ ನಾಯಕನಟಿಯಾಗಿದ್ದರು. ಈಗ ಆರುವರ್ಷಗಳ ನಂತರ ಇದರ ಎರಡನೇ ಭಾಗ 'ಜಾನಿ ಜಾನಿ ಯೆಸ್ ಪಾಪ' ನಿರ್ದೇಶಿಸಲು ಮುಂದಾಗಿದ್ದು, ಇದರಲ್ಲಿಯೂ ವಿಜಯ್ ನಾಯಕ ನಟ. ಹಾಗೆಯೇ ವಿಜಯ್ ಒಡೆತನದ 'ದುನಿಯಾ ಟಾಕೀಸ್' ಅಡಿ ಈ ಸಿನೆಮಾ ನಿರ್ಮಾಣವಾಗುತ್ತಿರುವುದು ವಿಶೇಷ.