ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಅದ್ದೂರಿ ಚಿತ್ರ "ಬಾಹುಬಲಿ೨: ಅಂತ್ಯ" ಬಿಡುಗಡೆಗೆ ಮುಂಚಿತವಾಗಿಯೇ ಬಾಕ್ಸ್ ಆಫಿಸ್ ನಲ್ಲಿ ಧೂಳಿಪಟ ಎಬ್ಬಿಸಿದೆ. ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯಲ್ಲಿಯೇ ಅಮೆರಿಕಾದಲ್ಲಿ ಈ ಸಿನೆಮಾ ೩ ಮಿಲಿಯನ್ ಡಾಲರ್ ಗಳಿಸಿರುವುದಾಗಿ ಗ್ರೇಟ್ ಇಂಡಿಯಾ ಫಿಲಂಸ್ ವಿತರಣಾ ಸಂಸ್ಥೆ ಹೇಳಿದೆ.