ಆರು ವರ್ಷಗಳ ನಂತರ ಯೋಗರಾಜ್ ಭಟ್ ನಿರ್ದೇಶನದಲ್ಲಿ ದಿಗಂತ್

ದಿಗಂತ್ ಕನ್ನಡ ಚಿತ್ರರಂಗಕ್ಕೆ ಸಂಪೂರ್ಣವಾಗಿ ಹಿಂದಿರುಗಿರವಂತಿದೆ. ಅವರು ನಟಿಸಿದ್ದ ಹಿಂದಿನ ಚಿತ್ರ 'ಚೌಕ' ಯಶಸ್ಸು ಕಂಡಿತ್ತು. ಈಗ ಮುಂದಿನ ವಾರ ಬಿಡುಗಡೆಯಾಗಲಿರುವ 'ಹ್ಯಾಪಿ ನ್ಯೂ ಇಯರ್'
ದಿಗಂತ್
ದಿಗಂತ್
Updated on
ಬೆಂಗಳೂರು: ದಿಗಂತ್ ಕನ್ನಡ ಚಿತ್ರರಂಗಕ್ಕೆ ಸಂಪೂರ್ಣವಾಗಿ ಹಿಂದಿರುಗಿರವಂತಿದೆ. ಅವರು ನಟಿಸಿದ್ದ ಹಿಂದಿನ ಚಿತ್ರ 'ಚೌಕ' ಯಶಸ್ಸು ಕಂಡಿತ್ತು. ಈಗ ಮುಂದಿನ ವಾರ ಬಿಡುಗಡೆಯಾಗಲಿರುವ 'ಹ್ಯಾಪಿ ನ್ಯೂ ಇಯರ್' ಎದುರು ನೋಡುತ್ತಿದ್ದಾರೆ. ಮತ್ತೀಗ ಯೋಗರಾಜ್ ಭಟ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸಲು ಸಹಿ ಮಾಡಿದ್ದು ನಟ ಉತ್ಸುಕರಾಗಿದ್ದಾರೆ. "ಈ ಸಿನೆಮಾದಲ್ಲಿ ಭಟ್ಟರ ಜೊತೆಗೆ ಆರು ವರ್ಷಗಳ ನಂತರ ಕೆಲಸ ಮಾಡುತ್ತಿದ್ದೇನೆ. ಈ ಸಿನೆಮಾದಲ್ಲಿ ನನ್ನ ನೆಚ್ಚಿನ ಗೆಳೆಯ ಗಣೇಶ್ ಜೊತೆಗೆ ನಟಿಸಲಿದ್ದೇನೆ. ಇದು ಈಗಿನ್ನು ಯೋಜನೆಯ ಹಂತದಲ್ಲಿದ್ದು, ಭಟ್ಟರು 'ಮುಗುಳು ನಗೆ' ಮುಗಿಸಿದ ನಂತರ ಇದರ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ" ಎನ್ನುತ್ತಾರೆ ದಿಗಂತ್.
ಹಾಗೆಯೆ ಪನ್ನಗಾಭರಣ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿಯೂ ನಟಿಸುತ್ತಿರುವ ದಿಗಂತ್ "ಚೊಚ್ಚಲ ನಿರ್ದೇಶಕನಿಂದ ಬಹಳ ಆಸಕ್ತಿದಾಯಕ ವಿಷಯವುಳ್ಳ ಕಥೆ ಇದು.. ಈ ಸಿನೆಮಾದಲ್ಲಿ ಹಲವು ಕಥೆಗಳಿವೆ ಮತ್ತು ಇವುಗಳು ವಿಭಿನ್ನ ಟ್ರ್ಯಾಕ್ ಗಳಲ್ಲಿ ನಡೆದು ಒಂದೆಡೆ ಸೇರುತ್ತವೆ. ಹೊಸ ವರ್ಷದ ದಿನ" ಎನ್ನುತ್ತಾರೆ ನಟ.
ಈ ಮಧ್ಯೆ ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ಕನ್ನಡ ರಿಮೇಕ್ 'ಉತ್ಸವ' ಸಿನಿಮಾದಲ್ಲಿಯೂ ನಟ ನಿರತರಾಗಿದ್ದಾರೆ. "ಮುಸ್ಸಂಜೆ ಮಹೇಜ್ ಜೊತೆಗೆ ಮತ್ತೊಂದು ಸಿನೆಮಾ ಕೂಡ ಸಾಲಿನಲ್ಲಿದೆ. ಅದರ ಚರ್ಚೆಗಳು ನಡೆಯುತ್ತಿವೆ. ಇದು ಜೂನ್ ನಲ್ಲಿ ಪ್ರಾರಂಭವಾಗಬಹುದು" ಎನ್ನುತ್ತಾರೆ ದಿಗಂತ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com