ನವದೆಹಲಿ: ಒಂದು ವೇಳೆ ನೀವು ಬಾಹಬಲಿ-2 ಸಿನಿಮಾ ಇಷ್ಟವಾಗಲಿಲ್ಲ ಎಂದರೇ ನಿಮಗೆ ಮಾನಸಿಕವಾಗಿ ಸಮಸ್ಯೆ ಇದೆ ಎಂದು ಅರ್ಥ ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳಿದ್ದಾರೆ..ಬಾಹುಬಲಿ ಸಿನಿಮಾ ವನ್ನು ಇಷ್ಟ ಪಡದ ಜನರಿಗೆ ಮಾನಸಿಕ ಆರೋಗ್ಯ ತಪಾಸಣೆ ಮಾಡಿಸುವುದಕ್ಕೆ ನಿರ್ಮಾಪಕ ಶೋಬು ಯರ್ಲಾಗಡ್ಡ ಅವರು ಧನ ಸಹಾಯ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ..ಯರ್ಲಾಗುಡ್ಡ ಪೋಸ್ಟ್ ಗೆ ಪ್ರತಕ್ರಿಯಿಸಿರುವ ಆರ್ ಜಿವಿ ಅಮೆರಿಕಾದಲ್ಲಿ ಬಾಹಬಲಿ-2 ಹವಾ ಸೃಷ್ಟಿಸಿದೆ. ಬಾಹುಬಲಿ ವೋಲ್ಕಾನೋ ಹಲವು ಭೂಕಂಪಗಳನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ..ಬಾಹುಬಲಿ-2 ಯಶಸ್ವಿಯಿಂದಾಗಿ ನನಗೆ ಹೊಟ್ಟೆಕಿಚ್ಚಿನಿಂದಾಗಿ ಆಸ್ಪತ್ರೆ ಸೇರಿದ್ದೇನೆ. ಹಲವು ಸಿನಿಮಾ ನಿರ್ಮಾಪಕರು ಈಗಾಗಲೇ ಐಸಿಯು ಗೆ ದಾಖಲಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ..ನೋ-ಈದ್, ನೋ ದಿವಾಳಿ, ನೋ ಅಮಿರ್, ನೋ ಶಾರುಖ್, ನೋ ಸಲ್ಮಾನ್, ಬಾಹಬಲಿ-2 ಸಿನಿಮಾ ಅತಿ ದೊಡ್ಡ ಇತಿಹಾಸ ಸೃಷ್ಟಿಸಿದೆ ಎಂದು ಬರೆದಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos