ಬೆಂಗಳೂರು: ಫ್ಲೋರೊಸೆಂಟ್ ಜೆರ್ಸಿ ನಂ.7, ಭುಜಗಳಿಗೆ ಪ್ಯಾಡ್, ತಲೆಗೆ ಹೆಲ್ಮೆಟ್, ಇದು ತಾರಕ್ ಸಿನಿಮಾದಲ್ಲಿ ದರ್ಶನ್ ಹೊಸ ಗೆಟಪ್. ಈ ಅವತಾರದಲ್ಲಿ ದರ್ಶನ್ ಅವರನ್ನು ಹಿಂದೆಂದೂ ನೋಡಿರಲಿಲ್ಲ.
ದರ್ಶನ್ ಅವರ ಈ ಗೆಟಪ್ ನೋಡಿ ಸುಲಭವಾಗಿ ಗುರುತಿಸಬಹುದಾಗಿದೆ. ತಾರಕ್ ನಲ್ಲಿ ದರ್ಶನ್ ಅಮೆರಿಕನ್ ಫುಟ್ ಬಾಲ್ ಆಟಗಾರನ ಸ್ಟೈಲ್ ನಲ್ಲಿದ್ದಾರೆ.
ಈ ಹಿಂದೆ ತೆರೆಕಂಡ ಜಗ್ಗುದಾದಾ ಮತ್ತು ಚಕ್ರವರ್ತಿ ಸಿನಿಮಾಗಳಲ್ಲಿ ದರ್ಶನ್ ಅಂಡರ್ ವರ್ಲ್ಡ್ ಡಾನ್ ಆಗಿ ಮಿಂಚಿದ್ದರು.
ಪ್ರಕಾಶ್ ಜಯರಾಮ್ ನಿರ್ದೇಶನದ ತಾರಕ್ ಸಿನಿಮಾದಲ್ಲಿ ದರ್ಶನ್ ಅಮೆರಿಕನ್ ಫುಟ್ ಬಾಲ್ ಆಟಗಾರನ ಪಾತ್ರ ನಿರ್ವಹಿಸಲಿದ್ದಾರೆ.
ಕ್ರೀಡೆಗೆ ಹೊಂದುಕೊಳ್ಳುವಂತ ಹೇರ್ ಕಟ್ ಹಾಗೂ ಟ್ರಿಮ್ ಮಾಡಿರುವ ಗಡ್ಡದಲ್ಲಿ ದರ್ಶನ್ ಫೋಟೋ ಹೊರಬಿದ್ದಿದೆ.
ತಾರಕ್ ಪಾತ್ರದಲ್ಲಿ ಅಭಿನಯಿಸುತ್ತಿರುವ ದರ್ಶನ್ ಫುಟ್ ಬಾಲ್ ಕೋಚ್ ಸತೀಶ್ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ. ಫುಟ್ ಬಾಲ್ ಆಟಗಾರ ಹಾಕಿಕೊಳ್ಳುವ ಡ್ರೆಸ್ ಅನ್ನು ದರ್ಶನ್ ಗಾಗಿ ಅಭಿ ವಿನ್ಯಾಸ ಮಾಡಿದ್ದಾರೆ. ತಾರಕ್ ಸಿನಿಮಾ ಶೂಟಿಂಗ್ ಮುಗಿದಿದ್ದು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದೆ. ಆಗಸ್ಟ್ 2ನೇ ವಾರದಲ್ಲಿ ಸಿನಿಮಾದ ಆಡಿಯೋ ರಿಲೀಸ್ ನಡೆಯುವ ಸಾಧ್ಯತೆಯಿದೆ,
ದಸರಾ ಹಬ್ಬದ ವೇಳೆಗೆ ತಾರಕ್ ಸಿನಿಮಾ ಬಿಡುಗಡೆಯಾಗಲಿದೆ. ದರ್ಶನ್ ಜೊತೆ ಪ್ರಕಾಶ್ ಜಯರಾಂ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ದುಶ್ಯಂತ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಶೃತಿ ಹರಿಹರನ್ ಸಾನ್ವಿ ಶ್ರೀವಾತ್ಸವ್ ನಟಿಸಿದ್ದಾರೆ.