ಅಮೀರ್ ಖಾನ್
ಸಿನಿಮಾ ಸುದ್ದಿ
ಶಾರೂಖ್, ಸಲ್ಮಾನ್ ಜೊತೆ ನನ್ನ ಕೆಲಸ ಹೋಲಿಕೆ ಮಾಡಲಾರೆ: ಅಮೀರ್ ಖಾನ್
ನಾನು ಸಲ್ಮಾನ್ ಖಾನ್ ಮತ್ತು ಶಾರೂಖ್ ಮಾಡುವ ಪಾತ್ರಗಳ ಅಭಿಮಾನಿ, ಆದರೆ ಅವರುಗಳ ಜೊತೆ ನನ್ನ ಕೆಲಸವನ್ನು ಹೋಲಿಕೆ ಮಾಡುವುದಿಲ್ಲ...
ಮುಂಬಯಿ: ಕ್ರಿಯೇಟಿವ್ ಕೆಲಸಕ್ಕೆ ಸಿಗುವ ಫಲಿತಾಂಶ ಅನಿರೀಶ್ರಿತವಾದದ್ದು ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.
ನಾನು ಸಲ್ಮಾನ್ ಖಾನ್ ಮತ್ತು ಶಾರೂಖ್ ಮಾಡುವ ಪಾತ್ರಗಳ ಅಭಿಮಾನಿ, ಆದರೆ ಅವರುಗಳ ಜೊತೆ ನನ್ನ ಕೆಲಸವನ್ನು ಹೋಲಿಕೆ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಅಮೀರ್ ಖಾನ್ ಸಿಕ್ರೇಟ್ ಸೂಪರ್ ಸ್ಟಾರ್ ಸಿನಿಮಾದ ಪ್ರಮೋಷನ್ ಆರಂಭಿಸಿದ್ದಾರೆ. ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದರು, ಸಲ್ಮಾನ್ , ಶಾರೂಕ್ ಖಾಮ್ ರಂತೆ ಸ್ಟಾರ್ ಗಿರಿ ನೀವು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಮೀರ್ ಖಾನ್, ಈಗ ನಾನು ಇರುವ ಸ್ಥಳದಲ್ಲೇ ಸಂತೋಷವಾಗಿದ್ದೇನೆ, ನಾನು ಪ್ರೇಕ್ಷಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ, ಇದನ್ನು ನಾನು ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದೇನೆ, ಇದಕ್ಕಾಗಿ ನಾನು ಆಬಾರಿಯಾಗಿದ್ದೇನೆ ಎಂದು ಅಮೀರ್ ವಿವರಿಸಿದ್ದಾರೆ.
ಹಲವು ಜನರಿಗೆ ತಾವು ಯಾವುದನ್ನು ಪ್ರೀತಿಸುತ್ತಾರೋ, ಅದರ ಬಗ್ಗೆ ಸ್ವತಂತ್ರವಾಗಿ ಕೆಲಸ ಮಾಡುವ ಹಕ್ಕಿರುವುದಿಲ್ಲ, ಆದರೆ ಈ ವಿಷಯದಲ್ಲಿ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.
ಒಂದು ಅಥವಾ ಎರಡು ಚಿತ್ರಗಳು ಫೇಲ್ ಆಗುವುದರಿಂದ ಸ್ಟಾರ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಾರುಖ್ ಮತ್ತು ಸಲ್ಮಾನ್ ಖಾನ್ ಮೆಗಾಸ್ಟಾರ್‌ಗಳೇ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ