ಬೆಂಗಳೂರು: ನಿರ್ದೇಶಕ ನಾಗಶೇಖರ್, ಸಿನಿಮಾ ಛಾಯಾಗ್ರಾಹಕ ಸತ್ಯ ಹೆಗಡೆ, ಕೊರಿಯೋಗ್ರಾಫರ್ ಇರ್ಮಾನ್ ಸರ್ದಾರಿಯಾ, ಸ್ಟಂಟ್ ಮಾಸ್ಟರ್ ರವಿವರ್ಮಾ ಸೇರಿದಂತೆ ಹಲವು ನುರಿತ ತಂತ್ರಜ್ಞರು, ಬಿನ್ನಿ ಮಿಲ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.
ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಸಿನಿಮಾ ನವೆಂಬರ್ ನಲ್ಲಿ ನಾನು ಮತ್ತು ಅವಳು ಸಿನಿಮಾದ ಟ್ರೇಲರ್ ಶೂಟಿಂಗ್ ನಡೆಯಿತು. ಆಗಸ್ಟ್ 16 ರಂದು ವಿಕ್ರಮ್ ರವಿಚಂದ್ರನ್ ಹುಟ್ಟು ಹಬ್ಬವಿದ್ದು, ನಾಗಶೇಖರ್ ಅಂದೇ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ನೀಡಿದ್ದು, ಸಿನಿಮಾ ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಆರು ಹಾಡುಗಳಿದ್ದು. ಪ್ರತಿಯೊಂದ ಭಾಷೆಯಲ್ಲೂ ಗಾಯಕರು ಬೇರೆ ಬೇರೆ ಯಾಗಿದ್ದಾರೆ,