ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿರುವ ನೀತುಬಾಲಾ ಮೇಘಾ ಅಲಿಯಾಸ್ ಮ್ಯಾಗಿ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ವಿಶಾಲ್ ಪುಟ್ಟಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ಸುಕೃತಾ ವಾಗ್ಲೆ ಮತ್ತು ತೇಜ್ ಗೌಡ ನಟಿಸಿದ್ದಾರೆ. ನನಗೆ ಸಿನಿಮಾ ಬಗ್ಗೆ ಯಾವಾಗಲು ಅಭಿರುಚಿಯಿತ್ತು. ನಾನು ಸಣ್ಣ ವಯಸ್ಸಿನವಳಾಗಿದ್ದಾಗಿಂದಲೂ ಚಿತ್ರರಂಗದಲ್ಲಿ ನನ್ನ ಅದೃಷ್ಠ ಪರೀಕ್ಷಿಸಿಬೇಕೆಂಬ ಬಯಕೆ ನನಗಿತ್ತು ಎಂದು ನೀತು ಬಾಲಾ ಹೇಳಿದ್ದಾರೆ.
ನಾನು ನನ್ನ ಎಂಜಿನೀಯರಿಂಗ್ ಪೂರ್ಣಗೊಳಿಸದ ಮೇಲೆ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದೇನೆ. ಆರ್ಕಿಟೆಕ್ಚರ್ ವಲಯ ನನಗೆ ತುಂಬಾ ನೆರವಾಗಿದೆ, ಆದರೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಈಗ ನೆರವೇರಿದೆ.
ಮಲಯಾಳಂ ನನ್ನ ಮಾತೃಭಾಷೆಯಾಗಿದೆ. ಸ್ಥಳೀಯ ಭಾಷೆಗಳನ್ನ ಕಲಿಯಲು ಬೆಂಗಳೂರು ಆಕೆಗೆ ನೆರವಾಗಿದೆಯಂತೆ. ಶೂಟಿಂಗ್ ಗಾಗಿ ವರ್ಷದ ಸಮಯ ಕೆಲಸದಿಂದ ದೂರಿವಿದ್ದ ನೀತು, ಮತ್ತೆ ಕೆಲಸಕ್ಕೆ ವಾಪಸ್ ಬಂದಿದ್ದಾರೆ.
ಹೆಣ್ಣಿನ ಮನಸ್ಸಿನಲ್ಲಿ ಆಗುವ ಭಾವೋದ್ವೇಗಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ಹೆಣೆದಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆ 'ಮೇಘ ಅಲಿಯಾಸ್ ಮ್ಯಾಗಿ'. ವಿಶಾಲ್ ಪುಟ್ಟಣ್ಣ ಈ ಚಿತ್ರ ನಿರ್ದೇಶಿಸಿದ್ದಾರೆ. ಸಿನಿಮಾ ಬಿಡುಗಡೆಗಾಗಿ ನೀತು ಕಾತುರದಿಂದ ಕಾಯುತ್ತಿದ್ದಾರೆ.