ಸೀತಾರಾಂ ಅವರ ದೈನಂದಿನ ಧಾರಾವಾಹಿಗಳಲ್ಲಿ ಬರುವ ಫ್ಯಾಮಿಲಿ ಡ್ರಾಮಾ, ರಾಜಕೀಯ, ಸಂಬಂಧಗಳು, ಅಪರಾಧ, ಥ್ರಿಲ್ಲರ್ ಮತ್ತು ಕೋರ್ಟ್ ಈ ಎಲ್ಲಾ ಥೀಮ್ ಗಳು ಸಿನಿಮಾದಲ್ಲಿವೆ. ನಾನು ಮೊದಲು ಮತದಾನ ರಾಜಕೀಯ ಕಥಾವಸ್ತುವುಳ್ಳ ಸಿನಿಮಾ ಸಿನಿಮಾ ಮಾಡಿದೆ. ಎರಡನೇಯದು ಮೀರಾ, ರಾಘವ ಮಾಧವ ಎಂಬ ಸಿನಿಮಾ. ಈಗ ಮೂರನೇಯದ್ದು ಕಾಫಿ ತೋಟ ಅಪರಾಧ ಮತ್ತು ಕೋರ್ಟ್ ರೂಂ ಕಥಾ ವಸ್ತುವುಳ್ಳ ಸಿನಿಮಾ ಎಂದು ಅವರು ಹೇಳಿದ್ದಾರೆ, ಸೀತಾರಾಂ ಅವರ ಸಿನಿಮಾದಲ್ಲಿ ಒಂದು ಘನತೆಯಿರುತ್ತದೆ ಹಾಗಾಗಿ ಪ್ರೇಕ್ಷಕರನ್ನು ಹೆಚ್ಚೆಚ್ಚು ಸೆಳೆಯುತ್ತದೆ.