ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿಗೆ ಭಾಜನರಾದ ನಿರ್ದೇಶಕ ಹೇಮಂತರಾವ್

ಗೋದಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತರಾವ್ ಅವರಿಗೆ ಗೊಲ್ಲಪುಡಿ ಶ್ರೀನಿವಾಸ್ ಇಂಟರ್ ನ್ಯಾಷನಲ್ ಪ್ರಶಸ್ತಿ ನೀಡಿ..,.
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಸ್ಟಿಲ್
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಸ್ಟಿಲ್
ಬೆಂಗಳೂರು:  ಗೋದಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತರಾವ್ ಅವರಿಗೆ ಗೊಲ್ಲಪುಡಿ ಶ್ರೀನಿವಾಸ್ ಇಂಟರ್ ನ್ಯಾಷನಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೊಲ್ಲಪುಡಿ ಶ್ರೀನಿವಾಸ್ ಮೆಮೊರಿಯಲ್ ಫೌಂಡೇಷನ್ 1997ರಿಂದ ಪ್ರತಿವರ್ಷ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದು 2016ನೇ ಸಾಲಿನಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶನಕ್ಕಾಗಿ ಹೇಮಂತರಾವ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೇಮಂತ ರಾವ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿ ನನಗೆ ಲಭಿಸುತ್ತದೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ.  ಈ ಹಿಂದೆ ಹಲವು ಸಿನಿಮಾಗಳು ಈ ಪ್ರಶಸ್ತಿ ಪಡೆದಿವೆ, ಈಗ ನಾನು ಕೂಡ ಈ ಪ್ರಶಸ್ತಿ ಪಡೆದಿರುವುದು ನನ್ನ ಗೌರವ ಹೆಚ್ಚಾಗಿದೆ.
ನನ್ನ ಮೊದಲ ಸಿನಿಮಾವನ್ನು ನಿಲ್ಲಿಸಲಾಯಿತು. ಅದರ ಅನುಭವದಿಂದ ನಾನು ಹಲವು ಪಾಠ ಕಲಿತಿದ್ದೇನೆ, ಅದರಿಂದ ಗೋದಿಬಣ್ಣ...ಸಿನಿಮಾ  ಉತ್ತಮವಾಗಿ ಮೂಡಿ ಬರಲು ಸಾದ್ಯವಾಯಿತು ಎಂದು ಹೇಳಿದ್ದಾರೆ. ನನ್ನ ,ಸಿನಿಮಾವನ್ನು ಹೊಗಳಿದ್ದರಿಂದ ನನಗೆ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಪ್ರೇಕ್ಷಕರು ಬದಲಾಗುತ್ತಿರುತ್ತಾರೆ, ಅವರಿಗೆ ಉತ್ತಮ ಕಥೆ ಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಜಮೀರ್ ಬಗ್ಗೆ ಅರಿವು ಮೂಡಿಸುವ ಸಿನಿಮಾ ಇದಾಗಿದ್ದು, ಈ ಸಂಬಂಧ ಮೀಡಿಯಾ ಹೌಸ್ ಗಳು ಹಲವು ಕಥೆಗಳನ್ನು ವರದಿ ಮಾಡಿವೆ ಎಂದು ಹೇಳಿದ್ದಾರೆ.
ಈ ಸಿನಿಮಾ 14 ದೇಶಗಳಲ್ಲಿ ರಿಲೀಸ್ ಆಗಿತ್ತು, ಕನ್ನಡ ಸಿನಿಮಾವೊಂದಕ್ಕೆ ಮೊದಲ ಬಾರಿಗೆ ಸಿಗುತ್ತಿರುವ  ಪ್ರಶಸ್ತಿ ಇದಾಗಿದೆ,  ಇದರ  ತಮಿಳು ತೆಲುಗಿನಲ್ಲಿ ರಿಮೇಕ್  ಹಕ್ಕನ್ನು ನಟ ಪ್ರಕಾಶ್ ರಾಜ್ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com