ಏಣಗಿ ಬಾಳಪ್ಪ ಬದುಕಿನ ನೋಟ

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಆ.18 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಏಣಗಿ ಬಾಳಪ್ಪನವರ ಜೀವನ ಕುರಿತ ಕಿರು ಪರಿ೮ಚಯ ಹೀಗಿದೆ.
ಏಣಾಗಿ ಬಾಳಪ್ಪ (1914-2017)
ಏಣಾಗಿ ಬಾಳಪ್ಪ (1914-2017)
ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಆ.18 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಏಣಗಿ ಬಾಳಪ್ಪನವರ ಜೀವನ ಕುರಿತ ಕಿರು ಪರಿಚಯ ಹೀಗಿದೆ-
ಬೆಳಗಾವಿ  ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ ಬಾಳಪ್ಪನವರ ತಾಯಿ ಬಾಳಮ್ಮ,  ತಂದೆ ಕರಿಬಸಪ್ಪ
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಬಾಳಪ್ಪ ಸ್ತ್ರೀ ಪಾತ್ರಗಳಲ್ಲಿಯೇ ಹೆಸರು ಗಳಿಸಿ ನಾಲ್ಕಾರು ಕಂಪನಿಗಳಲ್ಲಿ ದುಡಿದರೂ ವೃತ್ತಿಯಲ್ಲಿ ಸ್ಥಿರತೆ ಸಾಧಿಸಲಾಗದೆ ನೋವು ಪಟ್ಟಿದ್ದರು.  ಎಲ್ಲಾ ಬಗೆಯ ವಿರೋಧದ ನಡುವೆಯೂ 1946 ರಲ್ಲಿ ತಮ್ಮದೇ ಆದ ಕಲಾವೈಭವವೆಂಬ ನಾಟಕ ಸಂಸ್ಥೆ ಪ್ರಾರಂಭಿಸಿದ್ದರು. ಅಲ್ಲಿ ಅವರು ಹೊಸ ಹೊಸ ಕಲಾ ಪ್ರಕಾರವನ್ನು ಹುಟ್ಟುಹಾಕಿ ಪ್ರಯೋಗ ನಡೆಸಿ ಜಯಶೀಲರಾದರು. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಮಧ್ಯೆ ಇದ್ದ ಗೆರೆಯನ್ನು ತೊಳೆಯಲು ದುಡಿದರು. ಪೌರಾಣಿಕ, ಐತಿಹಾಸಿಕ ನಾಟಕಗಳ ಜೊತೆ ಜೊತೆಗೆ ಸಾಮಾಜಿಕ ನಾಟಕಗಳ ಪ್ರಯೋಗವನ್ನು ಯಶಸ್ವಿಯಾಗಿ ನಿಭಾಯಿಸಿದರು. 'ಪಾದುಕ ಪಟ್ಟಾಭಿಷೇಕ ನಾಟಕ'ದಲ್ಲಿ ಭರತನ ಪಾತ್ರವನ್ನು ಸೊಗಸಾಗಿ ಅಭಿನಯಿಸಿ, ಗರುಡ ಸದಾಶಿವರಾಯರ ಪ್ರೀತಿ ಭರವಸೆಗಳಿಗೆ ಪಾತ್ರರಾದರು.
ಮೂರು ಮದುವೆ
 ಬಾಳಪ್ಪನವರು ಒಟ್ಟು ಮೂರು ಮದುವೆಯಾಗಿದ್ದರು. ಒಬ್ಬ ಪತ್ನಿ ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ವಯಸ್ಸಿಗೆ ಬಂದಾಗ ಸಾವಿತ್ರಮ್ಮನ ಜತೆಗೆ ಸಪ್ತಪದಿ ತುಳಿದರು. ಮುಂದೆ ಲಕ್ಷ್ಮೀಬಾಯಿಯವರನ್ನು ಮನೆ ತುಂಬಿಸಿಕೊಂಡರು. ಒಟ್ಟು 9 ಮಕ್ಕಳು, ಮೊಮ್ಮಕ್ಕಳು-ಮರಿಮಕ್ಕಳು ಒಳಗೊಂಡ ತುಂಬು ಪರಿವಾರ ಅವರದ್ದು. ಪತ್ನಿ ಸಾವಿತ್ರಮ್ಮ ಮತ್ತು ಇತ್ತೀಚೆಗೆ ಮಗ ನಟರಾಜ್ ಮರಣ ಹೊಂದಿದ್ದರು. 
ಸ್ವಾರತಂತ್ರ ಹೋರಾಟಗಾರರಿಗೆ ಆಶ್ರಯ
ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳಪ್ಪನವರ ನಾಟಕ ಕಂಪನಿ ಆಶ್ರಯ ತಾಣ. ರಾತ್ರಿ ಬಿಟಿಷ್ ಪೊಲೀಸರು ಬೆನ್ನು ಹತ್ತಿದರೆ ಅವರೆಲ್ಲ ಬಾಳಪ್ಪನವರ ನಾಟಕ ಹೊಕ್ಕು ಬಣ್ಣ ಬಳಿದು, ಗಡ್ಡ-ಮೀಸೆ ಹಚ್ಚಿಕೊಂಡು ಪಾತ್ರದವರಾಗಿ ಆಕ್ಷಣದ ಸಂಕಷ್ಟದಿಂದ ಪಾರಾಗುತ್ತಿದ್ದರು. ಹೀಗಾಗಿ ಬ್ರಿಟಿಷ್ ಸರಕಾರದ ಒಂದು ಕಣ್ಣು ಇವರ ಮೇಲಿತ್ತು. 
ಪ್ರಮುಖ ನಾಟಕಗಳು
ಗಜ್ಯೋತಿ ಬಸವೇಶ್ವರ, ಕಿತ್ತೂರ ಚನ್ನಮ್ಮ, ಮಾವಬಂದ್ನಪೋ ಮಾವ, ಅಕ್ಕಮಹಾದೇವಿ, ಕುಂಕುಮ, ದೇವರಮಗು, ಶಾಲಾ ಮಾಸ್ತರ, ಹೇಮರೆಡ್ಡಿ ಮಲ್ಲಮ್ಮ, ರಾಜಾ ಹರಿಶ್ಚಂದ್ರ, ರಾಮಾಯಣ.
ಚಲನ ಚಿತ್ರ
ಮಾಡಿ ಮಡಿದವರು, ಜನುಮದ ಜೋಡಿ, ಗಡಿಬಿಡಿ ಕೃಷ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪರೀಕ್ಷೆ
ಪ್ರಶಸ್ತಿಗಳು
ನಾಟ್ಯ ಗಂಧರ್ವ -1968,
 'ಬಸವತತ್ವ ಭೂಷಣ'-1969
 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-1970, 71, 72, 76
 ಕರ್ನಾಟಕ ರಾಜ್ಯ ಪ್ರಶಸ್ತಿ (ನಾಟಕ ಕಲೆ)-1973
 ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ 'ನಾಟಕ ಕಲಾ ನಿಪುಣ'-1978
 ಕೇಂದ್ರ ಸಂಗೀತ ನಾಟಕ ಅಕಾಡೆಮಿ-1994
 ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ-1994
 ಚಾಳುಕ್ಯ ಪ್ರಶಸ್ತಿ-2002
 ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ-2005
 ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ-2006
 ಧಾರವಾಡ ಕವಿವಿಯಿಂದ ಗೌರವ ಡಾಕ್ಟರೇಟ್-2006

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com