ಭಾರತದ ಹಿರಿಯ ಛಾಯಾಗ್ರಾಹಕ ರಮಾನಂದ ಸೇನ್ ಗುಪ್ತಾ ನಿಧನ

ಮಾಡಿದ ದೇಶದ ಅತ್ಯಂತ ಹಳೆಯ ಛಾಯಾಗ್ರಾಹಕ ರಮಾಂದ ಸೇನ್ ಗುಪ್ತಾ ಬುಧವಾರ ಕೊಲ್ಕತ್ತಾದಲ್ಲಿ ನಿಧನರಾದರು
ರಮಾಂದ ಸೇನ್ ಗುಪ್ತಾ (1916-2017)
ರಮಾಂದ ಸೇನ್ ಗುಪ್ತಾ (1916-2017)
ಕೊಲ್ಕತ್ತಾ: ಜೀನ್ ರೆನೋಯರ್, ರಿತ್ವಿಕ್ ಘಾಟಕ್ ಮತ್ತು ಮೃಣಾಲ್ ಸೇನ್ ಅವರಂತಹ ದಂತಕಥೆಗಳೊಂದಿಗೆ ಕೆಲಸ ಮಾಡಿದ ದೇಶದ  ಹಿರಿಯ ಛಾಯಾಗ್ರಾಹಕ ರಮಾಂದ ಸೇನ್ ಗುಪ್ತಾ ಬುಧವಾರ ಕೊಲ್ಕತ್ತಾದಲ್ಲಿ ನಿಧನರಾದರು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 101 ವರ್ಷದ ಸೆನ್ ಗುಪ್ತಾ ಒಬ್ಬ ಮಗನನ್ನು ಬಿಟ್ಟು ಹೋಗಿದ್ದಾರೆ.
ಮೇ 8, 1916 ರಂದು ಢಾಕಾದಲ್ಲಿ ಜನಿಸಿದ ಸೇನ್ ಗುಪ್ತ ಶಾಂತಿನಿಕೇತನದಲ್ಲಿ ಅವರ ಆರಂಭಿಕ ವರ್ಷಗಳಲ್ಲಿ ಅಧ್ಯಯನ ಮಾಡಿದರು. 1938 ರಲ್ಲಿ ಕೋಲ್ಕತ್ತಾದಲ್ಲಿ ಫಿಲ್ಮ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಸಹಾಯಕ ಕ್ಯಮರಾ ಮನ್ ಆಗಿ ಸೇರಿಕೊಂಡರು.
ಸೇನ್ ಗುಪ್ತ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಿ ಕೆಲಸ  ನಿರ್ವಹಿಸಿದ ಪ್ರಥಮ ಚಿತ್ರ 1946 ರಲ್ಲಿ ತೆರೆಕಂಡ ಅರ್ದೆಂದ್ ಮುಖರ್ಜಿ ನಿರ್ದೇಶನದ "ಪುರ್ಬರಾಗ್"
ಎರಡು ವರ್ಷಗಳ ನಂತರ, ಫ್ರೆಂಚ್ ನಿರ್ದೇಶಕ ಜೀನ್ ರೆನಾಯರ್ ದಿ ರಿವರ್ (ಲೆ ಫ್ಲೆವ್, 1951 ರಲ್ಲಿ ಬಿಡುಗಡೆ) ಚಿತ್ರೀಕರಣಕ್ಕೆ ಕೊಲ್ಕತ್ತಾಕ್ಕೆ ಬಂದರು,  ಮತ್ತು ಸೇನ್ ಗುಪ್ತ ಆರಂಭದಲ್ಲಿ ಕ್ಲ್ಯಾಪ್ ಬಾಯ್ ಆಗಿ ಸೇರಿಕೊಂಡರು, ಮುಂದೆ ಕಾರ್ಯನಿರ್ವಾಹಕ ಛಾಯಾಗ್ರಾಹಕನಾಗಿ ಕೆಲಸ ಮಾಡಿದರು. 
ರಿತ್ವಿಕ್ ಗಾಟಕ್ ಅಾವರೊಡನೆ ಕೆಲಸ ಮಾಡಿದ ಸೇನ್ ಗುಪ್ತ ಅವರ ಚೊಚ್ಚಲ ಚಿತ್ರ 'ನಾಗರಿಕ್' ಗಾಗಿ ದುಡಿದರು. ಅದು 1952 ರಲ್ಲಿ ಪೂರ್ಣಗೊಂಡರೂ ಸಹ ನಿರ್ಫೇಶಕರ ಮರಣದ ಇಪ್ಪತ್ತೈದು ವರ್ಷದ ತರುವಾಯ ಅಂದರೆ 1977 ರಲ್ಲಿ ಬಿಡುಗಡೆಯಾಗಿತ್ತು. 
1955 ರಲ್ಲಿ, ಮೃಣಾಲ್ ಸೇನ್ ಅವರು ತಮ್ಮ ಮೊದಲ ಚಲನಚಿತ್ರ ರಾತ್ ಭೋರ್ ಅನ್ನು ಪ್ರಾರಂಭಿಸಿದಾಗ , ಸೇನ್ ಗುಪ್ತಾ ಅದರ ಛಾಯಾಗ್ರಾಹಕರಾಗಿ ಆಯ್ಕೆಯಾದರು.
ಶಿಲ್ಪಿ, ನಿಶಿತ್, ಬಿಂದೂರು ಚಾಲೆ , ಪರ್ಸೋನಲ್ ಅಸಿಸ್ಟೆಂಟ್ , ಹೆಡ್ ಮಾಸ್ಟರ್ ಮತ್ತು ಟೀನ್ ಭುವನೇರ್ ಪಾರೆ ಮುಂತಾದ 70 ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಸೇನ್ ಗುಪ್ತಾ ತಮ್ಮ ಕ್ಯಾಮರಾ ಕೈಚಳಕ ತೋರಿದ್ದರು.
ಸೇನ್ ಗುಪ್ತ ದಕ್ಷಿಣ ಕೊಲ್ಕತಾದ ಟೋಲಿಗಂಜ್.ಬಲ್ಲಿ ಪ್ರಾರಂಬವಾದ ಟೆಕ್ನಿಕೇಶನ್ಸ್ ಸ್ಟುಡಿಯೋದ ಸಹ ಸಂಸ್ಥಾಪಕ ಸದಸ್ಯರಾಗಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ ಸೇನ್ ಗುಪ್ತ ಸಾವು ಚಿತ್ರ ಜಗತ್ತಿಗೆ ಒಂದು ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದರು
"ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ, ಅವನ ಮರಣದಿಂದ ನೊಂದ ಕುಟುಂಬಕ್ಕೆ ನನ್ನ ಸಹಾನುಭೂತಿಯನ್ನು ಸಲ್ಲಿಸುತ್ತೇನೆ " ಎಂದು ಬ್ಯಾನರ್ಜಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com