ಮುಗುಳು ನಗೆ ಚಿತ್ರದ ಸ್ಟಿಲ್
ಸಿನಿಮಾ ಸುದ್ದಿ
ಚಿತ್ರ ಬಿಡುಗಡೆ ದಿನ ಗಣೇಶ ಹಬ್ಬ ಆಚರಿಸಲಿರುವ ಮುಗುಳು ನಗೆ ತಂಡ
ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ ನ ಚಿತ್ರ ಮುಗುಳು ನಗೆ ಸೆಪ್ಟೆಂಬರ್ 1ರಂದು....
ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ ನ ಚಿತ್ರ ಮುಗುಳು ನಗೆ ಸೆಪ್ಟೆಂಬರ್ 1ರಂದು 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ.
ಮುಂಗಾರು ಮಳೆ ಎಂಬ ಹಿಟ್ ಸಿನಿಮಾ ನೀಡಿದ ಈ ಜೋಡಿ ದಶಕದ ನಂತರ ಒಂದಾಗುತ್ತಿದ್ದಾರೆ.
ಎಸ್ಎಸ್ ಫಿಲ್ಮ್ಸ್ ನಡಿ ಸೈಯದ್ ಸಲಾಮ್ ಅವರ ಮೊದಲ ಚಿತ್ರ ಇದಾಗಿದ್ದು ಅವರು ಗಣೇಶ್ ಮೂವೀಸ್ ಮತ್ತು ಯೋಗರಾಜ್ ಭಟ್ ಸಿನಿಮಾಸ್ ಜೊತೆ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ.
ಗಣೇಶ ಹಬ್ಬದ ಸಮಯದಲ್ಲಿ ಚಿತ್ರ ಬಿಡುಗಡೆಯಾಗಬೇಕಾಗಿತ್ತು. ಆದರೆ ಅದೀಗ ಒಂದು ವಾರ ಮುಂದೆ ಹೋಗಿದೆ. ಚಿತ್ರದ ಬಿಡುಗಡೆ ದಿನ ಗಣೇಶ ಚತುರ್ಥಿಯನ್ನು ಚಿತ್ರತಂಡ ಆಚರಿಸಲು ನಿರ್ಧರಿಸಿದ್ದು ಬೆಂಗಳೂರಿನ ಕೆಂಪೇ ಗೌಡ ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್ ಮುಂದೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತಿದೆ.
ಮೈಸೂರು ಟಾಕೀಸ್ ಅಡಿ ಜಾಕ್ ಮಂಜು ಚಿತ್ರವನ್ನು ವಿತರಿಸುತ್ತಿದ್ದಾರೆ. ಚಿತ್ರದಲ್ಲಿ ಅಪೂರ್ವ ಅರೊರ, ನಿಖಿತಾ ನಾರಾಯಣ್, ಆಶಿಕಾ ನಾರಾಯಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಅಮೂಲ್ಯ ಕೂಡ ಒಂದು ಪಾತ್ರ ನಿರ್ವಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ