'ಮುಗುಳು ನಗೆ' ನಿಜವಾದ ಪ್ರೀತಿಯ ಶೋಧನೆ: ಗಣೇಶ್

ಮೊದಲ ಬಾರಿಗೆ ಮುಂಗಾರು ಮಳೆಯಲ್ಲಿ ಕೆಲಸ ಮಾಡಿದ್ದ ಯೋಗರಾಜ್ ಭಟ್ ಮತ್ತು ಗಣೇಶ್ ಆ ಚಿತ್ರದಲ್ಲಿ ಪ್ರೀತಿಯ...
ಮುಗುಳು ನಗೆ ಚಿತ್ರದಲ್ಲಿ ಗಣೇಶ್
ಮುಗುಳು ನಗೆ ಚಿತ್ರದಲ್ಲಿ ಗಣೇಶ್
ಮೊದಲ ಬಾರಿಗೆ ಮುಂಗಾರು ಮಳೆಯಲ್ಲಿ ಕೆಲಸ ಮಾಡಿದ್ದ ಯೋಗರಾಜ್ ಭಟ್ ಮತ್ತು ಗಣೇಶ್ ಆ ಚಿತ್ರದಲ್ಲಿ ಪ್ರೀತಿಯ ಮಳೆಯನ್ನೇ ಹರಿಸಿದ್ದರು. ನಂತರ ಗಾಳಿಪಟ ಬಂತು. ಅದು ಕೂಡ ಹಿಟ್ ಆಯಿತು.
ಇದೀಗ ದಶಕದ ನಂತರ ಮತ್ತೆ ಇಬ್ಬರೂ ಮುಗುಳು ನಗೆಯಲ್ಲಿ ಒಟ್ಟಾಗಿದ್ದು ಇದು ಕೂಡ ಪ್ರೀತಿಯ ಕುರಿತಾದ ಚಿತ್ರ. ಈ ಶುಕ್ರವಾರ ಬಿಡುಗಡೆಗೆ ಕಾದಿರುವ ಮುಗುಳು ನಗೆ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಟ ಗಣೇಶ್ ಅನೇಕ ವಿಷಯಗಳನ್ನು ಹಂಚಿಕೊಂಡರು.
ವಿವಿಧ ಆಯಾಮಗಳ ಮೂಲಕ ನಿಜವಾದ ಪ್ರೀತಿಯನ್ನು ಶೋಧಿಸುವ ಚಿತ್ರವಿದು. ವಿವಿಧ ಪರಿಸ್ಥಿತಿಗೆ ತಕ್ಕಂತೆ ಅದು ಬದಲಾಗುತ್ತದೆ. ಪ್ರತಿ ಪ್ರೀತಿಯು ಖುಷಿಯಲ್ಲಿ ಅಥವಾ ದುಃಖದಲ್ಲಿ ಕೊನೆಯಾಗುವುದಿಲ್ಲ. ಪ್ರೀತಿಯೆಂದರೆ ಅದು ಖುಷಿಯ ನೋವು. ಅದರಿಂದ ಉತ್ಸಾಹ ಸಿಗುತ್ತದೆ. ರೊಮ್ಯಾನ್ಸ್, ಪ್ರೀತಿ ಎಂಬುದು ನಿರಂತರ. ಪ್ರತಿ ದಿನ ಒಬ್ಬರು ಇನ್ನೊಬ್ಬರ ಮೇಲೆ ಪ್ರೀತಿಯಾಗುತ್ತಾರೆ. 
ಜನರಿಗೆ ಇಷ್ಟವಾದ ತಮ್ಮ ನಗೆಯನ್ನು ಯೋಗರಾಜ ಭಟ್ಟರು ಪ್ರೀತಿ, ತಮಾಷೆ ಮತ್ತು ಇತರ ಭಾವನೆಗಳನ್ನು ತೋರಿಸಲು ಬಳಸಿಕೊಂಡಿದ್ದಾರೆ. ಇವೆಲ್ಲವೂ ಮುಗುಳು ನಗೆಯಲ್ಲಿದೆ ಎನ್ನುತ್ತಾರೆ.
ಮುಂಗಾರು ಮಳೆಯಲ್ಲಿದ್ದಂತಹ ಅಭಿಮಾನಿಗಳಿಗೆ ಇಷ್ಟವಾದ ಮಾತು ಮುಗುಳು ನಗೆಯಲ್ಲಿ ಕೂಡ ಇದೆ. ಯೋಗರಾಜ್ ಭಟ್ ಮತ್ತು ನನ್ನ ನಡುವೆ ಸಾಮ್ಯತೆಯಿದೆ. ವರ್ಷಗಳು ಕಳೆದಂತೆ ಅವರು ಮಾಡುವ ಸಿನಿಮಾ, ಯೋಚಿಸುವ ರೀತಿ ಪಕ್ವವಾಗುತ್ತಾ ಹೋಗುತ್ತಿದೆ. ಅವರ ನಾಡಿಮಿಡಿತ ನನಗೆ ಅರ್ಥವಾಗಿದೆ, ನನ್ನದು ಅವರಿಗೆ ಅರ್ಥವಾಗಿದೆ. ಭಟ್ಟರ ಸಿನಿಮಾದಲ್ಲಿ ಸಂಭಾಷಣೆ ಅತ್ಯಂತ ಸಹಜವಾಗಿರುವುದರಿಂದ ಅವುಗಳನ್ನು ಹೇಳುವುದು ಸುಲಭ ಆದರೆ ಪಾತ್ರವನ್ನು ಅಭಿನಯಿಸುವುದು ಕಷ್ಟ ಎಂಬುದು ಗಣೇಶ್ ಅಭಿಪ್ರಾಯ.
ಮುಗುಳು ನಗೆಯಲ್ಲಿ ಕೊನೆಗೆ ಅಳುವುದು ಮತ್ತು ನಗುವುದನ್ನು ಒಟ್ಟೊಟ್ಟಿಗೆ ಮಾಡಬೇಕಾಗಿತ್ತು. ಅದು ನನಗೆ ನಿಜಕ್ಕೂ ಸವಾಲಾಗಿತ್ತು ಎನ್ನುತ್ತಾರೆ.ಚಿತ್ರದಲ್ಲಿ ನಾಲ್ವರು ಹೀರೊಯಿನ್ ಗಳ ಜೊತೆ ಅಭಿನಯಿಸುವುದು ಕಷ್ಟವಾಗಲಿಲ್ಲ ಎನ್ನುತ್ತಾರೆ ಗಣೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com