ಖ್ಯಾತ ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿ ನಿಧನ

ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿನ್ನೆಲೆ ಗಾಯಕ ಎಲ್ ಎನ್ ಶಾಸ್ತ್ರಿ (46) ಆ.30 ರಂದು ವಿಧಿವಶರಾಗಿದ್ದಾರೆ.
ಎಲ್ಎನ್ ಶಾಸ್ತ್ರಿ
ಎಲ್ಎನ್ ಶಾಸ್ತ್ರಿ
ಬೆಂಗಳೂರು: ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿನ್ನೆಲೆ ಗಾಯಕ ಎಲ್ ಎನ್ ಶಾಸ್ತ್ರಿ (46) ಆ.30 ರಂದು ವಿಧಿವಶರಾಗಿದ್ದಾರೆ. 
ಬೆಂಗಳೂರಿನ ಸ್ವಗೃಹದಲ್ಲಿ ಎಲ್ಎನ್ ಶಾಸ್ತ್ರಿ ವಿಧಿವಶರಾಗಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ಹೆಸರುವಾಸಿಯಾಗಿದ್ದ ಎಲ್ಎನ್ ಶಾಸ್ತ್ರಿ ಅವರು 3 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಕಂಠದಾನ ಮಾಡಿದ್ದಾರೆ. 1996 ರಲ್ಲಿ ಅಜಗಜಾಂತರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಲ್ಎನ್ ಶಾಸ್ತ್ರಿ ಪ್ರವೇಶಿಸಿದ್ದರು. ಹಿನ್ನೆಲೆ ಗಾಯಕರಾಗಿದ್ದ ಶಾಸ್ತ್ರಿ ಅವರು 25 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 
ಜನುಮದ ಜೋಡಿ ಚಿತ್ರದ ಕೋಲುಂಡೆ ಜಂಗಮದೇವ ಹಾಡಿನ ಮೂಲಕ ಮತ್ತಷ್ಟು ಪ್ರಸಿದ್ಧರಾಗಿದ್ದ ಎಲ್ಎನ್ ಶಾಸ್ತ್ರಿ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com